Wednesday, July 6, 2022

Latest Posts

ಹೆಜ್ಜೇನು ದಾಳಿಗೆ ಬಲಿಯಾದ ಕಾಫಿ ಮಂಡಳಿ ಅಧ್ಯಕ್ಷ ಭೋಜೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಅಧ್ಯಕ್ಷರಾದ ಎಂ.ಎಸ್.ಭೋಜೇಗೌಡ (73) ಹೆಜ್ಜೇನು ದಾಳಿಗೆ ಬಲಿಯಾದ ಘಟನೆ ನಡೆದಿದೆ. ತಾಲೂಕಿನ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರಂತ ಘಟನೆ ನಡೆದಿದೆ.
ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಭೋಜೇಗೌಡರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೋಜೇಗೌಡರು ಸತತ 2ನೇ ಬಾರಿಗೆ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಎರಡು ಬಾರಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1 ಬಾರಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಎಂ.ಎಸ್. ಬೋಜೇಗೌಡ ಕೆಲಸ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss