Thursday, August 18, 2022

Latest Posts

ಗವಿಮಠದಿಂದ ದತ್ತು ಪಡೆದ ಅಡವಿಹಳ್ಳಿ ಗ್ರಾಮದಲ್ಲಿ ನಡೆಯಿತು ಭೂಮಿಪೂಜೆ  

ಹೊಸ ದಿಗಂತ ವರದಿ, ಕೊಪ್ಪಳ:

ಭಾರತವನ್ನು ನೋಡಬೇಕೆಂದರೆ ತಾಜಮಹಲ್, ಅಜಂತಾ, ಎಲ್ಲೋರಾ ಹಾಗೂ ಕುತುಬ್ ಮೀನಾರ್ ನೋಡುವುದಲ್ಲ. ನಿಜವಾದ ಭಾರತ ಇರುವುದು ಹಳ್ಳಿಯ ಜನರ ಹೃದಯದಲ್ಲಿ. ಅವರ ಹೃದಯ ಶ್ರೀಮಂತಿಕೆಯಲ್ಲಿ. ಆದ್ದರಿಂದ ಸ್ವಚ್ಚತೆ ಹಾಗೂ ಸುಂದರವಾಗಿ ನಿಮ್ಮ ಹಳ್ಳಿಯನ್ನು ಉಳಿಸಿಕೊಂಡು ಹೋಗುವುದರಿಂದ ನಿಮ್ಮ ಹಳ್ಳಿಯಲ್ಲಿಯೇ  ಭಾರತವನ್ನು ನೋಡಬಹುದಾಗಿದೆ ಎಂದು ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು  ಹೇಳಿದರು.
ಗವಿಮಠದ ವತಿಯಿಂದ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಕಲ್ಪಂದಿಂದ ದತ್ತು ಪಡೆದ ಯಲಬುರ್ಗಾ ತಾಲೂಕಿನ ಅಡವಿಹಳ್ಳಿ ಗ್ರಾಮವನ್ನು ಪರಿವರ್ತಿಸುವ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಇಂದಿಗೂ ಪ್ರತಿಶತ 70 ರಷ್ಟು  ರೈತರು ಹಳ್ಳಿಗಳಲ್ಲೆ ಇದ್ದಾರೆ. ಕೇವಲ ನಗರಗಳಷ್ಟೇ ಅಭಿವೃದ್ಧಿಯಾದರೆ ಸಾಲದು, ಹಳ್ಳಿಗಳು ಅಭಿವೃದ್ಧಿಯಾಗಬೇಕಿದೆ. ಅಂದಾಗ ಮಾತ್ರ ಭಾರತ ಅಭಿವೃದ್ಧಿಯಾಗಲು ಸಾಧ್ಯ. ಮುಂದಿನ ಕೆಲವೇ ದಿನಗಳಲ್ಲಿ ಈ ಅಡವಿಹಳ್ಳಿ ಗ್ರಾಮ ಸುಂದರವಾಗಿ ನಿರ್ಮಾಣವಾಗಲಿದೆ. ಮೂಲ ಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಶಾಲೆಗಳ ಕಟ್ಟಡಗಳು ಇನ್ನಿತರ ಸೌಲಭ್ಯಗಳು ನಿಮಗೆ ದೊರೆಯಲಿವೆ. ಆದ್ದರಿಂದ ಪ್ರತಿಯೋಬ್ಬರ ಮನಸ್ಥಿತಿಗಳು ಬದಲಾಗಬೇಕು.  ಸ್ವಚ್ಚತೆ ಹಾಗೂ ಸುಂದರವಾಗಿ ನಿಮ್ಮ ಹಳ್ಳಿಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮ ಮೇಲಿದೆ. ಕರ್ನಾಟಕದಲ್ಲಿ ಇದೊಂದು ಮಾದರಿ ಗ್ರಾಮವಾಗಬೇಕು ಆ ರೀತಿಯಲ್ಲಿ  ನಿಮ್ಮ ಗ್ರಾಮವನ್ನು ಸ್ವಚ್ಚತೆ ಹಾಗೂ ಸುಂದರವಾಗಿ ಇಟ್ಟುಕೊಂಡು ಸಾಗಬೇಕು ಎಂದರು.
ಸಂಸದ ಸಂಗಣ್ಣ ಕರಡಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್,  ಸಮಾರಂಭ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಬಿಜಕಲ್‍ನ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ವೇದಿಕೆಯ ಮೇಲೆ ಜಿಲ್ಲಾ ಪಂಚಾಯಿ ಸದಸ್ಯ ಹನಮಂತಗೌಡ ಪಾಟೀಲ್, ಯಂಕಣ್ಣ ಯರಾಶಿ, ಜಿಲ್ಲಾ ಪಂಚಾಯತ್ ಸಿ.ಇ.ಒಗಳಾದ  ರಘುನಂಧನ್‍ಮೂರ್ತಿ,  ಕಲ್ಯಾಣ ಕರ್ನಾಟಕ ಇಲಾಖೆಯ ಶಾಂತರೆಡ್ಡಿ, ಮುಕುಂದ ಸ್ಟೀಲ್ ಕಂಪನಿಯ ಸಿ.ಇ.ಓ ಓ.ಪಿ ಸಿಂಗ್, ವಿವಿಧ ಗಣ್ಯರು ಹಾಗೂ ಅಡವಿಹಳ್ಳಿ  ಗ್ರಾಮದ ಗ್ರಾಮ ಮಂಚಾಯತಿ ಸದಸ್ಯರು, ಹಾಗೂ ಸುತ್ತಲಿನ ನಾಗರೀಕರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ನುಡಿಗಳನ್ನು ಸರ್ವೋದಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗರಾಜ ದೇಸಾಯಿ, ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!