ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್: ನೂತನ ಸಚಿವ ಸಂಪುಟ ರಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಸೋಮವಾರ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡರು.ಈ ವೇಳೆ ಸಂಪುಟದ ಒಟ್ಟು 16 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

ಗುಜರಾತಿನ ನೂತನ ಸಚಿವ ಸಂಪುಟದ 17 ಸದಸ್ಯರ ಪೈಕಿ ಒಬ್ಬರು ಮಹಿಳೆ ಇದ್ದಾರೆ. ಗಾಂಧಿನಗರದ ಹೊಸ ಸೆಕ್ರೆಟರಿಯೇಟ್ ಬಳಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವರ ಪಟ್ಟಿ

ಕಾನು ದೇಸಾಯಿ, ಋಷಿಕೇಶ್ ಪಟೇಲ್, ರಾಘವ್ಜಿ ಪಟೇಲ್, ಬಲವಂತಸಿಂಹ ರಜಪೂತ್, ಕುಂವರ್ಜಿ ಬವಲಿಯಾ, ಮುಲು ಬೇರಾ, ಕುಬೇರ್ ದಿಂಡೋರ್ ಮತ್ತು ಭಾನುಬೆನ್ ಬಬಾರಿಯಾ ಅವರು ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದರು.

ಇಬ್ಬರು ನಾಯಕರು, ಹರ್ಷ ಸಾಂಘ್ವಿ ಮತ್ತು ಜಗದೀಶ್ ವಿಶ್ವಕರ್ಮ ಅವರು ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇತರ ಆರು ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು – ಪರಶೋತ್ತಮ್ ಸೋಲಂಕಿ, ಬಚು ಖಬಾದ್, ಮುಖೇಶ್ ಪಟೇಲ್, ಪ್ರಫುಲ್ ಪನ್ಶೇರಿಯಾ, ಕುವೆರ್ಜಿ ಹಲ್ಪತಿ ಮತ್ತು ಭಿಖುಸಿನ್ಹ್ ಪರ್ಮಾರ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!