ಬೀದರ್‌ ಆಮ್‌ ಆದ್ಮಿ ಪಕ್ಷದಿಂದ ಅಗ್ನಿಪಥ ಹಿಂಪಡೆಯುವಂತೆ ರಾಷ್ಟ್ರಪತಿಗಳಿಗೆ ಮನವಿ

ಹೊಸದಿಗಂತ ವರದಿ ಬೀದರ್:

ಕೇಂದ್ರ ಸರ್ಕಾರದಿಂದ ಆರಂಭಿಸಲಾಗಿರುವ ಅಗ್ನಿಪಥ್ ಸೇನಾ ನೇಮಕಾತಿ ಪ್ರಕ್ರಿಯೆಗೆ ದೇಶಾದ್ಯಾಂತ ವಿರೋಧ ವ್ಯಕ್ತವಾಗುತ್ತಿದ್ದು  ಕೇವಲ ೪ ವರ್ಷಗಳ ಅವಧಿಗೆ ಸೇವೆ ಸಲ್ಲಿಸಿ ಅವರ ಮನೋಭಾವನೆಯ ಆಟ ಆಡುವ ಕೆಲಸವನ್ನು  ಕೇಂದ್ರದ ಸರ್ಕಾರ ಮಾಡುತ್ತಿದೆ. ಇಂಥ ಅಲ್ಪಾವಧಿ ಯೋಜನೆಗಳು ಸೈನಿಕರ ಮನೋಭಾವನ್ನು ಕುಗ್ಗಿಸುತ್ತದೆಯೇ ಹೊರತು  ಗುಣಮಟ್ಟದ ಸೇವೆಗೆ ಎಂದಿಗೂ ದಾರಿ ಮಾಡಿಕೊವುದಿಲ್ಲ  ಆದ್ದರಿಂದ  ಈ ಕೂಡಲೆ ಈ ಯೋಜನೆ ಹಿಂಪಡೆಬೇಕೆಂದು ಬಿದರ್‌ ಜಿಲ್ಲಾ ಆಮ್‌ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ  ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ದೀಪಕ ಮಾಲಗಾರ್, ರಮೇಶ ಪಾಸ್ವಾನ್, ಕೈಲಾಸ ದೂಪೆ, ಅವಿನಾಶ ಕಮಲಾಪೂರೆ, ಸೈಯದ ಜಮೀಲ್, ದಿನೇಶ ಗುಪ್ತಾ, ಕಿರಣ ಕುಮಾರ್‌, ಸಿದ್ದಪ್ಪ ಫುಲಾರೆ, ಶಿವರಾಜ ಕೋರೆ, ವಿಜಯಲಕ್ಷ್ಮಿ ಸಿಂಧೆ, ರಾಹುಲ್, ಎಂ ಡಿ ಮುಸ್ತಾಫಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!