Thursday, June 30, 2022

Latest Posts

ಬೀದರ್ | ವಿಧಾನ ಪರಿಷತ್ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಹೊಸ ದಿಗಂತ ವರದಿ, ಬೀದರ್:

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಕಾರ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಡಿಸೆಂಬರ್ 2ರಂದು ತರಬೇತಿ ನಡೆಯಿತು.
ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಸೂಚನೆಗಳು ಕಾಲಕಾಲಕ್ಕೆ ಗಣನೀಯವಾಗಿ ಬದಲಾಗುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆಯ ಕಾರ್ಯವು ಹೊಸದಾಗಿರುತ್ತದೆ. ನಾವುಗಳು ಎಷ್ಟೇ ತರಬೇತಿ ಪಡೆದಿದ್ದರೂ ಕೆಲವು ವಿಷಯಗಳನ್ನು ಮತ್ತೆ ಮತ್ತೆ ಕಲಿಯಬೇಕಾಗುತ್ತದೆ. ಆದ್ದರಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಸ್ಥಳೀಯ ಕ್ಷೇತ್ರಗಳಿಂದ ನಡೆಯುವ ಚುನಾವಣೆಗೆ ನೇಮಕಗೊಂಡ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳು ಮತದಾನದ ಹಿಂದಿನ ದಿನದಂದು (ಮಸ್ಟರಿಂಗ್ ದಿನ), ಮತಗಟ್ಟೆಗೆ ಬಂದ ನಂತರ, ಮತದಾನದ ದಿನದಂದು ಹಾಗೂ ಮತದಾನದ ವೇಳೆಯಲ್ಲಿ ಮತ್ತು ಮತದಾನ ಪೂರ್ಣಗೊಂಡ ನಂತರ ವಿವಿಧ ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ನಿಮ್ಮ ನಿಮ್ಮ ಕರ್ತವ್ಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮತಪೆಟ್ಟಿಗೆಯನ್ನು ಬಳಸುವ ರೀತಿ ಮತ್ತು ವಿಧಾನವನ್ನು ಸರಿಯಾಗಿ ತರಬೇತಿಯಲ್ಲಿಯೇ ಅಭ್ಯಸಿಸಬೇಕು. ಶಾಸನಬದ್ಧ ಮತ್ತು ಶಾಸನಬದ್ದವಲ್ಲದ ನಮೂನೆಗಳನ್ನು ತಿಳಿದಕೊಳ್ಳಬೇಕು. ಯಾವುದೇ ಸಂದೇಹ ಉಂಟಾದರೆ ಪರಿಹರಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯಟ್ಟಮದ ಚುನಾವಣಾ ಮಾಸ್ಟರ್ ಟ್ರೇನರ್ ಹಾಗೂ ಎಂಎಲ್ಸಿ ಚುನಾವಣಾ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ನಿಗದಿಪಡಿಸಿದ ಮಸ್ಟರಿಂಗ್ ಕೇಂದ್ರದಲ್ಲಿ ಡಿಸೆಂಬರ್ 9ರಂದು ಸರಿಯಾದ ಸಮಯಕ್ಕೆ ಹಾಜರಾಗಬೇಕು. ತಿಳಿಸಿದ ಸ್ಥಳ ಮತ್ತು ಸಮಯದಲ್ಲಿ ಸೇರಬೇಕು. ಪರಿಶೀಲನಾ ಪಟ್ಟಿಯ ಪ್ರಕಾರ ಚುನಾವಣಾ ಸಾಮಾಗ್ರಿಗಳು ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮತಗಟ್ಟೆಯಲ್ಲಿ ನೋಟೀಸ್ ಬೋರ್ಡನಲ್ಲಿ ಮತದಾನದ ಪ್ರದೇಶವನ್ನು ನಿರ್ದಿಷ್ಠಪಡಿಸಿದ ನೋಟಿಸನ್ನು ಮತ್ತು ಮತಗಟ್ಟೆಯಲ್ಲಿ ಮತ ಚಲಾಯಿಸುವ ಮತದಾರರ ವಿವರ ಹಾಕಬೇಕು. ನಮೂನೆಯಲ್ಲಿ ಸ್ಪರ್ದಿಸುವ ಉಮೇದುವಾರರ ಹೆಸರು ಮತ್ತು ಚಿನ್ಹೆಗಳ ವಿವರಗಳನ್ನು ಪ್ರದರ್ಶಿಸಬೇಕು. ಮತಗಟ್ಟೆ ಕೊಠಡಿಯಿಂದ 100 ಮೀ. ಗುರುತು ಹಾಕಬೇಕು. 100 ಮೀ. ಒಳಗಡೆ ಯಾವುದೇ ಪಕ್ಷದ ಅಥವಾ ಉಮೇದುವಾರರ ಭಿತ್ತಿ ಪತ್ರ ಪೋಸ್ಟರ್ ಇತರೆ ಯಾವುದಾದರು ಇದ್ದಲ್ಲಿ ತೆಗೆದು ಹಾಕಬೇಕು. ಎಲ್ಲಾ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ತಲುಪಿದ ತಕ್ಷಣ ಪುನಃ ಎಲ್ಲಾ ಸಾಮಗ್ರಿಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಮತಗಟ್ಟೆ ಒಳಗಡೆ ಮತದಾರರನ್ನು ಗುರುತಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಒಬ್ಬ ಅಧಿಕಾರಿ ನೌಕರರನ್ನು ಮತದಾರರನ್ನು ಗುರುತಿಸುವ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿರುತ್ತದೆ. ಅವರು ಮತದಾರರನ್ನು ಗುರುತಿಸುವ ಕಾರ್ಯ ನಿರ್ವಹಿಸುವರು. ಮತಗಟ್ಟೆ ಕೊಠಡಿ ಪರಿಶೀಲಿಸಿ ಯಾವುದೇ ಧರ್ಮದ, ಇನ್ನಿತರ ಚಿತ್ರಗಳು ಚಿನ್ಹೆಗಳಿದ್ದಲ್ಲಿ ತೆಗೆಯಿಸಬೇಕು. ಮತಗಟ್ಟೆ ಸಿಬ್ಬಂದಿ ಮತ್ತು ಏಜೆಂಟರು ಕುಳಿತುಕೊಳ್ಳುವ ಸ್ಥಳಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಮತಪೆಟ್ಟಿಗೆಗಾಗಿ ಸೂಕ್ತ ಸ್ಥಳದ ವ್ಯವಸ್ಥೆ ಮಾಡಬೇಕು. ಮತಗಟ್ಟೆ ಒಳಗಡೆ ಮೊಬೈಲ್ ಬಳಸಬಾರದು ಎನ್ನುವ ವಿವಿಧ ನಿಯಮಗಳನ್ನು ತಿಳಿಸಿದರು.
ಮತದಾನದ ಸಮಯ ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಇರುತ್ತದೆ. ಬೆಳಿಗ್ಗೆ 7 ಗಂಟೆಗೆ ಎಲ್ಲಾ ಸಿಬ್ಬಂದಿ ಸಿದ್ದರಿರಬೇಕು. ಬೆಳಗ್ಗೆ 8ಕ್ಕೆ ಮತದಾನ ಪ್ರಾರಂಭಿಸಿ, ಪ್ರತಿ ಎರಡು ಗಂಟೆಗೊಮ್ಮೆ ಎಷ್ಟು ಮತದಾನ ಆಗಿದೆ ಎಂಬ ಮಾಹಿತಿ ಪ್ರಿಸೈಡಿಂಗ್ ಅಧಿಕಾರಿ ಡೈರಿಯಲ್ಲಿ ನಮೂದಿಸತಬೇಕು. ಮುಕ್ತಾಯಕ್ಕೆ 15 ನಿಮಿಷ ಮುಂಚೆ ಬಾಕಿ ಇರುವ ಅವಧಿಯ ಬಗ್ಗೆ ಮಾಹಿತಿ ನೀಡಬೇಕು. ಸಂಜೆ 4ಕ್ಕೆ ಮತದಾನ ಮುಕ್ತಾಯಗೊಳಿಸತಕ್ಕದ್ದು, ಮತದಾರರು ಇನ್ನೂ ಬಾಕಿ ಇದ್ದಲ್ಲಿ ಸಾಲಿನಲ್ಲಿರುವವರಿಗೆ ಕೊನೆಯಿಂದ ಕ್ರಮ ಸಂಖ್ಯೆ ಚೀಟಿ ನೀಡಿ ಮತದಾನಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಲಾಯಿತು.
ಮತದಾನ ಪೂರ್ಣಗೊಂಡ ನಂತರ ಮತದಾನ ಮಾಡಲು ನಿರ್ದಿಷ ್ಟ ಪಡಿಸಿದ ಅಂತಿಮ ಘಳಿಗೆಯಲ್ಲಿ ಹಾಜರಿರುವ ಎಲ್ಲಾ ಮತದಾರರು ಮತ ನೀಡಿದ ನಂತರ, ಮತದಾನವು ಪೂರ್ಣಗೊಂಡ ಬಗ್ಗೆ ಔಪಚಾರಿಕವಾಗಿ ಘೋಷಿಸಿ, ನಂತರ ಮತಪೆಟ್ಟಿಗೆಯನ್ನು ಮೊಹರು ಮಾಡಬೇಕು. ಮತದಾರರಿಗೆ ಕೊಟ್ಟ ಮತಪತ ್ರಗಳ ಸಂಖ್ಯೆಯನ್ನು ಪರಿಶೀಲಿಸಿ, ವಿವರವನ್ನು ಮತಪತ್ರಗಳ ಲೆಕ್ಕ ನಮೂನೆಯಲ್ಲಿ ನಿಖರವಾಗಿ ನಮೂದಿಸಬೇಕು. ಮತಪತ್ರಗಳ ಲೆಕ ್ಕ ನಮೂನೆಗಳನ್ನು ಹಾಜರಿರುವ ಮತಗಟ್ಟೆ ಏಜೆಂಟರಿಗೆ ನೀಡಿ ಸಹಿ
ಪಡೆದುಕೊಳ್ಳಬೇಕು ಎನ್ನುವಂತಹ ಬೇರೆ ಬೇರೆ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಲಾಯಿತು.
ಈ ಚುನಾವಣೆಯಲ್ಲಿ ಅಳಿಸಲಾಗದ ಶಾಹಿ ಇರುವುದಿಲ್ಲ. ಡಿಮಸ್ಟರಿಂಗ್ ಕೇಂದ್ರವನ್ನು ಬಿಡುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಪಡೆದುಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಕೂಡ ಗಮನ ಹರಿಸಬೇಕು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ತಹಸೀಲ್ದಾರ ಶಕೀಲ್ ಮೊಹ್ಮದ್ ಹಾಗೂ ಚುನಾವಣಾ ಶಾಖೆಯ ಶೀರಸ್ತೇದಾರ ಶಾಂತನು ಪೂರಂ, ಸತ್ಯದೀಪ ಮನಗೋಳಿ ಹಾಗೂ ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss