IPL 2023-27 ಪ್ರಸಾರ ಹಕ್ಕು ಮಾರಾಟ: ಪ್ರತಿ‌ ಪಂದ್ಯಕ್ಕೆ 100 ಕೋಟಿ ದಾಟಿ ಮುನ್ನಡೆದ ಬಿಡ್ಡಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
2023 ರಿಂದ 2027 ಐಪಿಎಲ್‌ ಪ್ರಸಾರದ ಮಾಧ್ಯಮ ಹಕ್ಕುಗಳ ವಿತರಣೆಗೆ ಬಿಸಿಸಿ ನಡೆಸುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಬಿಡ್ಡರ್‌ಗಳಿಂದ ನೀರೀಕ್ಷೆಗೆ ಮೀರಿದ ಸ್ಪಂದನೆ ವ್ಯಕ್ತವಾಗಿದ್ದು ಬಿಸಿಸಿಐ ದೊಡ್ಡ ಪ್ರಮಾಣದ ಲಾಭಗಳಿಕೆ ಮಾಡುವುದು ನಿಚ್ಚಳವಾಗಿದೆ.
ಹರಾಜುಪ್ರಕ್ರಿಯೆಯ ಮೊದಲ ದಿನವಾದ ಭಾನುವಾರ ಐಪಿಎಲ್‌ ಪ್ರಸಾರ ಹಕ್ಕಿಗಾಗಿ ವಿವಿಧ ಕಂಪನಿಗಳ ನಡುವೆ ನಡೆದ ಹರಾಜು  ಮೌಲ್ಯವು 43000 ಕೋಟಿ ರೂಪಾಯಿಗಳ ಗಡಿ ದಾಟಿದೆ. ಪಂದ್ಯಾವಳಿಯ ಪ್ರತಿ ಪಂದ್ಯದ ಒಟ್ಟಾರೆ ಮೌಲ್ಯವು 100 ಕೋಟಿ ಗಡಿ ದಾಟಿ ಮುನ್ನಡೆದಿದೆ. ಹಾರಾಜು ಪ್ರಕ್ರಿಯೆ ಸೋಮವಾರವೂ ಸಹ ಮುಂದುವರೆದಿದ್ದು, ಇಂದು ಸಂಜೆಯ ವೇಳೆಗೆ ಹರಾಜಿನ ವಿಜೇತರು ಯಾರೆಂಬ ಸ್ಪಷ್ಟ ಚಿತ್ರಣ ಸಿಗಲಿದೆ.
ಹರಾಜಿನಲ್ಲಿ ರಿಲಾಯನ್ಸ್‌ ವಯಾಕಾಮ್‌, ಡಿಸ್ನಿಪ್ಲಸ್‌ ಹಾಟ್‌ ಸ್ಟಾರ್‌, ಸೋನಿ ನೆಟ್ವರ್ಕ್‌, ಟೈಮ್ಸ್‌ ಇಂಟರ್ನೆಟ್‌, ಮೊದಲಾಗ ಪ್ರಮುಖ ಕಂಪನಿಗಳು ಭಾಗಿಯಾಗಿವೆ. ಈ ವರೆಗೆ ವಿಶ್ವದಲ್ಲಿ ಅತ್ಯಂತ ಶ್ರೀಮಂತ ಸ್ಪೋರ್ಟ್‌ ಲೀಗ್‌ ಆಗಿ ಅಮೆರಿಕಾದ NFL (ನ್ಯಾಷನಲ್‌ ಫುಟ್ಬಾಲ್‌ ಲೀಗ್)‌ ಇದ್ದು ಅದರ ಪ್ರತಿ ಪಂದ್ಯದ ಪ್ರಸಾರ ಮೌಲ್ಯ 135 ಕೋಟಿಗಳಷ್ಟಿದೆ, ಬಿಸಿಸಿಐ ಈಗಾಗಲೇ ಪ್ರತಿ ಪಂದ್ಯಕ್ಕೆ 100 ಕೋಟಿ ಪಡೆಯಲಿದ್ದು, ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾತಂಡವಾಗುವತ್ತ ದಾಪುಗಾಲಿಟ್ಟಿದೆ.

IPL 2023-2027ರ ಮಾಧ್ಯಮ ಹಕ್ಕುಗಳ ಮೂಲ ಬೆಲೆ
ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು 4 ವಿಭಿನ್ನ ಪ್ಯಾಕೇಜ್‌ಗಳಾಗಿ ವಿಂಗಡಿಸಿದೆ. ಅದರಂತೆ ಮೊದಲ ಎರಡು ಪ್ಯಾಕೇಜ್‌ ಗಳಲ್ಲಿ ಬಿಸಿಸಿಐಗೆ 43000 ಕೋಟಿ ಲಾಭ ಲಭಿಸಿದೆ. 4 ಪ್ಯಾಕೇಜ್‌ಗಳಲ್ಲಿ ಮೊದಲನೆಯದು ಭಾರತೀಯ ಉಪಖಂಡದ ಟಿವಿ ಹಕ್ಕುಗಳಾಗಿದ್ದರೆ ಎರಡನೆಯದು ಡಿಜಿಟಲ್ ಹಕ್ಕುಗಳಾಗಿರುತ್ತದೆ.
ಪ್ಯಾಕೇಜ್ ಎ ( ಭಾರತೀಯ ಉಪ ಖಂಡದಲ್ಲಿ ನೇರಪ್ರಸಾರ) – ಪ್ರತಿ ಪಂದ್ಯಕ್ಕೆ 49 ಕೋಟಿ ರೂ.
ಪ್ಯಾಕೇಜ್ ಬಿ (ಉಪಖಂಡದಲ್ಲಿ ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕು) – ಪ್ರತಿ ಪಂದ್ಯಕ್ಕೆ 33 ಕೋಟಿ ರೂ.
ಪ್ಯಾಕೇಜ್ ಸಿ(ಕೆಲ ಪಂದ್ಯಗಳ ನೇರಪ್ರಸಾರ) – ಪ್ರತಿ ಪಂದ್ಯಕ್ಕೆ 11 ಕೋಟಿ ರೂ.
ಪ್ಯಾಕೇಜ್ ಡಿ(ವಿದೇಶಗಳಲ್ಲಿ ಪ್ರಸಾರ) – ಪ್ರತಿ ಆಟಕ್ಕೆ 3 ಕೋಟಿ ರೂ. ನಿಗದಿಪಡಿಸಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!