ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಕೊರೋನಾ ಎರಡನೇ ಅಲೆಯಿಂದಾಗಿ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೇ ನಿಂತಿದ್ದು, ಇದೀಗ ಮತ್ತೆ ಆರಂಭವಾಗಲಿದೆ.
ಸದಸ್ಯರ ರೀ ಎಂಟ್ರಿ ಬಹುತೇಕ ಖಚಿತವಾಗಿದ್ದು, ಅಫಿಶಿಯಲ್ ಅನೌಂನ್ಸ್ಮೆಂಟ್ ಬಾಕಿ ಇದೆ. ಜೂನ್ 20 ರಿಂದ ಮತ್ತೆ ಸೀಸನ್ ಶುರುವಾಗಲಿದ್ದು, ಕಂಟೆಸ್ಟೆಂಟ್ಸ್ಗಳನ್ನು ಕ್ವಾರೆಂಟೀನ್ ಮಾಡಬೇಕಿದೆ. ಅದಾದ ನಂತರ ಕಾರ್ಯಕ್ರಮ ಮತ್ತೆ ಆರಂಭವಾಗಲಿದೆ.
ಬಿಗ್ಬಾಸ್ ಕಡೆ ವಾರಗಳಲ್ಲಿ ಕೊರೋನಾ ಕಾರಣದಿಂದ ಸುದೀಪ್ ಅವರು ಕಾರ್ಯಕ್ರಮ ನಡೆಸಿಕೊಟ್ಟಿರಲಿಲ್ಲ. ಇದೀಗ ಮತ್ತೆ ಸೀಸನ್ ಶುರುವಾಗುತ್ತಿದ್ದು, ಮನೆಯ ಹಾವ ಭಾವ ಹೇಗಿರುತ್ತದೆ ಕಾದುನೋಡಬೇಕಿದೆ.