Sunday, April 11, 2021

Latest Posts

ಭಾನುವಾರದಿಂದ ಆರಂಭವಾಗಲಿದೆ ಜನಪ್ರಿಯ ಶೋ ಬಿಗ್‌ಬಾಸ್: ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋದು ಯಾರು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಭಾನುವಾರದಿಂದ ಆರಂಭವಾಗಲಿದೆ.
ಭಾನುವಾರ ಸಂಜೆ ಆರು ಗಂಟೆಗೆ ಶೋ ಆರಂಭವಾಗಲಿದೆ. ಇನ್ನು ಉಳಿದ ದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ ಎಂದು ಕಲರ‍್ಸ್ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಿಚ್ಚ ಸುದೀಪ್ ಶೋ ಹೋಸ್ಟ್ ಮಾಡುವುದಿಲ್ಲ ಎನ್ನು ರೂಮರ‍್ಸ್ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದು ಸುಳ್ಳು. ಈ ಬಾರಿ ಕೂಡ ಸುದೀಪ್ ಶೋ ಹೋಸ್ಟ್ ಮಾಡಲಿದ್ದಾರೆ. ಕೊರೋನಾದಿಂದಾಗಿ ಬಿಗ್‌ಬಾಸ್ ವಿಳಂಬವಾಯ್ತು ಎಂದಿದ್ದಾರೆ. ಇನ್ನು ಈ ಬಾರಿ 17 ಸ್ಫರ್ಧಿಗಳು ಭಾಗವಹಿಸಲಿದ್ದು, ಸಂಪೂರ್ಣ ಸೆಲೆಬ್ರಿಟಿಗಳ ಸೀಸನ್ ಇದಾಗಿದೆ ಎಂದಿದ್ದಾರೆ.
ಸಿನಿಮಾ, ಕಿರುತೆರೆ,ರಾಜಕೀಯ, ಹಾಸ್ಯನಟರು, ಕ್ರೀಡೆ, ಗಾಯನ ಹೀಗೆ ಎಲ್ಲಾ ರಂಗದಿಂದಲೂ ಸ್ಫರ್ಧಿಗಳನ್ನು ಆರಿಸಲಾಗಿದೆ.
ಸ್ಫರ್ಧಿಗಳು ಈಗಾಗಲೇ ಕ್ವಾರೆಂಟೈನ್‌ನಲ್ಲಿದ್ದಾರೆ. ಕೊನೆ ಪರೀಕ್ಷೆಯಲ್ಲಿ ಕೊರೋನಾ ಸೋಂಖು ದೃಢಪಟ್ಟರೆ ಅವರು ಸ್ಪರ್ಧೆಯಿಂದ ಹೊರಗುಳಿಯಲಿದ್ದಾರೆ. ಈ ಬಾರಿ ಮನೆಯೊಳಗೆ ಯಾರಿಗೂ ಪ್ರವೇಶವಿಲ್ಲ ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss