Wednesday, August 17, 2022

Latest Posts

ಮತ್ತೆ ನಮ್ಮನ್ನು ರಂಜಿಸಲಿದೆ ಬಿಗ್ ಬಾಸ್: ದೊಡ್ಮನೆಯಲ್ಲಿ ಇರಲಿದ್ದಾರೆ ಈ ಸ್ಪರ್ಧಿಗಳು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:
ಇತ್ತೀಚೆಗಷ್ಟೆ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 8 ಮುಕ್ತಾಯವಾಗಿದ್ದು, ಈ ನಡುವೆ ತೆಲುಗಿನ ಬಿಗ್ ಬಾಸ್ ಸೀಸನ್ 5 ಶುರುವಾಗಿದೆ.
ನಾಗಾರ್ಜುನ ಅವರ ನಿರೂಪಣೆಯಲ್ಲಿ ತೆಲುಗು ಬಿಗ್ ಬಾಸ್ ಗೆ ಬೇಡಿಕೆ ಇದ್ದು, ಭಾನುವಾರ ಭರ್ಜರಿ ಓಪನಿಂಗ್ ಆಗಿದ್ದು, ಈ ಸೀಸನ್ ನಲ್ಲಿ ಜನರೆದುರು ಬರುವ ಸ್ಪರ್ಧಿಗಳು ಯಾರು ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದಿದ್ದಾರೆ.
ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಗಳಾಗಿ ಸಿರಿ ಹನುಮಂತ್, ನಿರೂಪಕ ರವಿ, ವಿಶ್ವ, ಸರಯೂ, ನಟರಾಜ್, ಅನೀ, ಲೋಬೋ, ಮಾನಸ್, ಉಮಾದೇವಿ, ಜೆಸ್ವಂತ್, ಪ್ರಿಯಾಂಕಾ ಸಿಂಗ್, ವಿಜೆ ಸನ್ನಿ, ಆರ್ ಜೆ ಕಾಜಲ್, ಶಾನ್ ಮುಖ್, ಪ್ರಿಯಾ, ಶ್ವೇತಾ ವರ್ಮಾ, ಶ್ರೀರಾಮ್ ಚಂದ್ರ, ಲಹರಿಶರಿ. ಹಮಿದ ಅವರು ದೊಡ್ಮನೆಯಲ್ಲಿ ಮಿಂಚಲಿದ್ದಾರೆ.
ಸದ್ಯ 100 ದಿನಗಳ ಕಾಲ 70 ಕ್ಯಾಮೆರಾಗಳ ನಡುವೆ ಈ ಸ್ಪರ್ಧಿಗಳು ಇರಲಿದ್ದು, ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಬಿಗ್ ಬಾಸ್ ಟಲಿಕಾಸ್ಟ್ ಆಗಲಿದೆ. ವಾರಾಂತ್ಯದಲ್ಲಿ ರಾತ್ರಿ 9 ಗಂಟೆಗೆ ನಾಗಾರ್ಜುನ ಅವರು ವಾರದ ಕಥೆ ನಡೆಸಿಕೊಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!