ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಗೆ ಬ್ರೇಕ್ ಹಾಕಲು ಲಾಕ್ ಡೌನ್ ಜಾರಿ ಮಾಡಿ ಸಿಎಂ ಯುಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನ ಸುದ್ದಿಗೋಷ್ಠಿ ನಡೆಸಿದ ಸಿಎಂ, ಮೇ 10ರ ಸೋಮವಾರದಿಂದ ಮೇ. 24 ರ ವರೆಗೆ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.
- ಅಗತ್ಯ ವಸ್ತುಗಳನ್ನ ಕೊಳ್ಳುವುದಕ್ಕೂ ಪ್ರತ್ಯೇಕ ಸಮಯ ನಿಗದಿಯಾಗಿದ್ದು, ಬೆಳಗ್ಗೆ 6-10ರವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ
- ಹಾಲಿನ ಅಂಗಡಿಗಳು ಸಂಜೆ 6 ಗಂಟೆಯವರೆಗೆ ತೆರೆದಿರಲು ಅವಕಾಶ
- ವೈದ್ಯಕೀಯ ಸೇವೆಗೆ ಮಾತ್ರವೇ ಅವಕಾಶ
- ಅಂತರ್ ಜಿಲ್ಲಾ, ಅಂತರ್ ರಾಜ್ಯ ಪ್ರವಾಸಕ್ಕೂ ಅನುಮತಿ ಇಲ್ಲ
- ತಳ್ಳುಗಾಡಿಯಲ್ಲಿ ತರಕಾರಿ ಮಾರಾಟಕ್ಕೆ ಅನುಮತಿ
- ಸರ್ಕಾರಿ ಕಚೇರಿಗಳು ಭಾಗಶಃ ಕೆಲಸ ಮಾಡಲು ಅನುಮತಿ
- ಮದುವೆಗಳಲ್ಲಿ 50 ಜನರು ಭಾಗವಹಿಸಲು ಅನುಮತಿ
- ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನ ಓಡಾಟ
- ಕೈಗಾರಿಕಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ
- ಆನ್ಲೈನ್ ಡೆಲಿವರಿ ಸರ್ವಿಸ್ಗೂ ಅವಕಾಶ
- ಹೊಟೆಲ್ ಗಳಿಂದ ಪಾರ್ಸೆಲ್ ಗೆ ಅವಕಾಶ
- ಪಬ್ , ಬಾರ್ ರೆಸ್ಟೋರೆಂಟ್ ಕ್ಲೋಸ್, ಪಾರ್ಸಲ್ಗೂ ಅವಕಾಶ ಇಲ್ಲ
- ಕ್ಯಾಬ್, ಆಟೋ ತುರ್ತು ಸೇವೆಗೆ ಅವಕಾಶ
- ಬಸ್,ಮೆಟ್ರೋ ಸಂಚಾರವೂ ಸಂಪೂರ್ಣ ಸ್ತಬ್ಧ
- ಥಿಯೇಟರ್, ಜಿಮ್, ಮಾಲ್ ಸಂಪೂರ್ಣ ಬಂದ್
- ಬ್ಯೂಟಿ ಪಾರ್ಲರ್, ಸಲೂನ್ ಅಂಗಡಿಗೆ ಬೀಗ
- ಕಾಲೇಜು ಬಂದ್
- ಕಟ್ಟಡ ಕಾರ್ಮಿಕರಿಗೆ ಅವಕಾಶ
- ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗಬಾರದು
- ಖಾಸಗಿ ಮತ್ತು ಸರ್ಕಾರಿ ಸಾರಿಗೆ ವ್ಯವಸ್ಥೆ ಇರಲ್ಲ