Thursday, August 11, 2022

Latest Posts

BIG NEWS | ದೆಹಲಿಯಲ್ಲಿ ಹೈ ಅಲರ್ಟ್: ಆಗಸ್ಟ್ 16 ರವರೆಗೆ ಡ್ರೋಣ್, ಪ್ಯಾರಾ ಗ್ಲೈಡಿಂಗ್ ಗೆ ನಿಷೇಧ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
 
ಹೊಸದಿಗಂತ ಆನ್ ಲೈನ್ ಡೆಸ್ಕ್:

ಸ್ವಾತಂತ್ರ್ಯ ದಿನಾಚರಣೆ ಇನ್ನೊಂದು ತಿಂಗಳಿರುವಂತೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಉಗ್ರರು ದಾಳಿ ನಡೆಸುವ ಶಂಕೆಯಿಂದಾಗಿ ಪೊಲೀಸರು ಎಚ್ಚೆತ್ತುಕೊಂಡಿದ್ದು,  ಈ  ಹಿನ್ನೆಲೆ ದೆಹಲಿ ಪೊಲೀಸ್ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹೇರಿದೆ.
ರಾಜಧಾನಿಯಲ್ಲಿ ಒಂದು ತಿಂಗಳವರೆಗೆ ಪ್ಯಾರಾ ಗ್ಲೈಡಿಂಗ್, ಹ್ಯಾಂಗ್ ಗ್ಲೈಡಿಂಗ್, ಯುಎವಿ, ಯುಎಎಸ್, ಮೈಕ್ರೋಲೈಟ್ ಏರ್ಕ್ರಾಫ್ಟ್, ಡ್ರೋಣ್, ಹಾಟ್ ಏರ್ ಬಲೂನ್, ಸಣ್ಣಗಾತ್ರ ಏರ್ಕ್ರಾಫ್ಟ್ ಕ್ವಾಡ್ ಕಾಪ್ಟರ್ ಮತ್ತು ಪ್ಯಾರಾ ಜಂಪಿಂಗ್ನ್ನು ನಿಷೇಧಿಸಲಾಗಿದೆ.
ಜುಲೈ 16 ರಿಂದ ಆಗಸ್ಟ್ 16 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಬಾಲಾಜಿ ಶ್ರೀವಾಸ್ತವ್ ಪ್ರಕಟಣೆ ಹೊರಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss