Thursday, June 30, 2022

Latest Posts

BIG NEWS | ಸಿಂಗಲ್ ಡೋಸ್ ‘ಸ್ಪುಟ್ನಿಕ್ ಲೈಟ್’ ವ್ಯಾಕ್ಸಿನ್ ರಿಲೀಸ್: ಶೇಕಡಾ 80ರಷ್ಟು ಪರಿಣಾಮಕಾರಿ ಎಂದ ಸಂಸ್ಥೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಷ್ಯಾದಿಂದ ಭಾರತಕ್ಕೆ ಬಂದ ಕೊರೋನಾ ಲಸಿಕೆ ಸ್ಪುಟ್ನಿಕ್, ಈಗ ಸಿಂಗಲ್ ಡೋಸ್ ಲಸಿಕೆ ಬಿಡುಗಡೆ ಮಾಡಿದ್ದು, ಇದು ಶೇಕಡಾ 80ರಷ್ಟು ಪರಿಣಾಮಕಾರಿ ಎಂಬುದಾಗಿ ತಿಳಿಸಿದೆ.
ಈ ಕುರಿತಂತೆ ಸ್ಪುಟ್ನಿಕ್ ಸಂಸ್ಥೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಸ್ಪುಟ್ನಿಕ್ ಕುಟುಂಬದ ಹೊಸ ಸದಸ್ಯರನ್ನು ಪರಿಚಯಿಸುತ್ತಿದ್ದೇವೆ. ಅದು ಒಂದು ಡೋಸ್ ಸ್ಪುಟ್ನಿಕ್ ಲೈಟ್. ಇದು 80% ಪರಿಣಾಮಕಾರಿತ್ವದೊಂದಿಗೆ ಕ್ರಾಂತಿಕಾರಿಯಾಗಿದೆ. 1 ಶಾಟ್ COVID19 ಲಸಿಕೆಯಾಗಿದೆ. ಅನೇಕ 2-ಶಾಟ್ ಲಸಿಕೆಗಳಿಗಿಂತ ಹೆಚ್ಚಾಗಿದೆ. ಸ್ಪುಟ್ನಿಕ್ ಲೈಟ್ ಲಸಿಕೆ ದರಗಳನ್ನು ದ್ವಿಗುಣಗೊಳಿಸುತ್ತದೆ. ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
ರಷ್ಯಾದ ನೇರ ಹೂಡಿಕೆ ನಿಧಿ (ಆರ್.ಡಿ.ಐ.ಎಫ್.) ಮೇ 6 ರಂದು ಒಂದೇ ಸಲ ಪಡೆದುಕೊಳ್ಳುವ ಸ್ಪುಟ್ನಿಕ್ ಲೈಟ್ ಲಸಿಕೆಯ ಬಳಕೆಯನ್ನು ಅಧಿಕೃತಗೊಳಿಸಿದೆ. ಸ್ಪುಟ್ನಿಕ್ ಲೈಟ್ ಕೊರೋನಾ ವೈರಸ್ ತಡೆ ಲಸಿಕೆಯಾಗಿದ್ದು ಶೇಕಡ 80 ರಷ್ಟು ಪರಿಣಾಮಕಾರಿತ್ವ ಹೊಂದಿದೆ ಎಂದು ರಷ್ಯಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾದ ಗಮಾಲೆ ಇನ್ಸ್ಟಿಟ್ಯೂಟ್ ನಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್-19 ವಿರುದ್ಧ ಹೋರಾಟದ ಈ ಲಸಿಕೆ ಶೇಕಡ 79.4 ರಷ್ಟು ಪರಿಣಾಮಕಾರಿಯಾಗುದೆ. ಈ ಲಸಿಕೆಗೆ 10 ಡಾಲರ್ ಗಿಂತ ಕಡಿಮೆ ವೆಚ್ಚವಾಗಲಿದೆ. ರಫ್ತು ಮಾಡಲು ಇದನ್ನು ಮೀಸಲಿಡಲಾಗಿದೆ. ಮೊದಲ ಲಸಿಕೆ ಸ್ಪುಟ್ನಿಕ್ ಶೇಕಡ 97.6 ರಷ್ಟು ಪರಿಣಾಮಕಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss