ಹೊಸದಿಗಂತ ಆನ್ಲೈನ್ ಡೆಸ್ಕ್:
ದೇಶದ ಅತ್ಯಂತ ವಿಶ್ವಾಸಾರ್ಹ ತನಿಖಾ ಸಂಸ್ತೆಯಾದ ಸಿಬಿಐ ಇಂದು ತನ್ನದೇ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಈ ದಾಳಿ ಯಾಕೆ ನಡೆದಿದೆ ಎಂಬ ಮಾಹಿತಿ ನೀಡಲು ಅದು ನಿರಾಕರಿಸಿದೆ.
ಘಾಜಿಯಾಬಾದ್ನ ಶಿವಾಲಿಕ್ ಅಪಾರ್ಟ್ಮೆಂಟ್ಸ್ನಲ್ಲಿರುವ ಕೆಲವು ಅಧಿಕಾರಿಗಳ ನಿವಾಸದ ಮೇಲೆ ಸಿಬಿಐ ಎಂದಿನ ಶೈಲಿಯಲ್ಲಿ ತನ್ನ ಮಿಂಚಿನ ದಾಳಿ ನಡೆಸಿದೆ.
ದಾಳಿಗೊಳಗಾಗಿರುವ ಅಧಿಕಾರಿಗಳ ಹೆಸರುಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿಲ್ಲವಾದರೂ, ಓರ್ವ ಡಿವೈಎಸ್ಪಿ ಶ್ರೇಣಿಯ ಅಧಿಕಾರಿ ನಿವಾಸದ ಮೇಲೆ ದಾಳಿಯಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದಲ್ಲದೆ ಘಾಜಿಯಾಬಾದ್ ನಲ್ಲಿರುವ ತನ್ನ ಇಲಾಖೆಯ ಅಧಿಕಾರಿಗಳ ನಿವಾಸ ಹಾಗೂ ಅಧಿಕಾರಿಗಳಿಗೆ ಸಂಬಂಧಪಟ್ಟ ಜಾಗಗಳಲ್ಲಿ ಕೂಡಾ ಸಿಬಿಐ ತಪಾಸಣೆ ನಡೆಸಿದೆ.