BIG NEWS | ಉಗ್ರ ಸಂಘಟನೆ ಜೊತೆ ಲಿಂಕ್: ಅಸ್ಸಾಂನಲ್ಲಿ ಮೂರನೇ ಮದರಸಾ ನೆಲಸಮ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಮದರಸಾಗಳ ಮೇಲಿನ ತನ್ನ ಸಮರ ಮುಂದುವರಿಸಿರುವ ಅಸ್ಸಾಂ ಸರಕಾರ ಇದೀಗ ಮೂರನೇ ಮದರಸಾ ನೆಲಸಮ ಮಾಡಿದೆ.
ಬೊಂಗೈಗಾಂವ್‌ನಲ್ಲಿರುವ ಈ ಮದರಸಾ ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಎಸ್‌ಪಿ ಸ್ವಪ್ನನೀಲ್ ದೇಕಾ ಅವರು, ಮದರಸಾವನ್ನು ಖಾಸಗಿ ಭೂಮಿಯಲ್ಲಿ ಅಗತ್ಯ ನಿಬಂಧನೆ, ಪರವಾನಗಿ ಇಲ್ಲದೆ ನಿರ್ಮಿಸಲಾಗಿದೆ. ಮದರಸಾ ಕಟ್ಟಡದ ರಚನೆಯೂ ದುರ್ಬಲವಾಗಿದ್ದು, ಮಾನವ ವಾಸಕ್ಕೂ ಇದು ಅಸುರಕ್ಷಿತವಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಇದನ್ನು ಕೆಡವಲಾಗಿದೆ ಎಂದು ಹೇಳಿದ್ದಾರೆ.
ಈ ಶಿಕ್ಷಣ ಸಂಸ್ಥೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳ ಕೆಂದ್ರವಾಗಿ ಬಳಸುತ್ತಿರುವುದನ್ನು ಇತ್ತೀಚೆಗಷ್ಟೇ ಪೊಲೀಸರು ಪತ್ತೆ ಹಚ್ಚಿದ್ದರು. ಮದರಸಾವನ್ನು ಕೆಡವಲು ಒಟ್ಟು ೮ ಬುಲ್ಡೋಜರ್‌ಗಳನ್ನು ಬಳಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!