BIG NEWS | ಮಸೀದಿಯಲ್ಲಿ ಭಾರೀ ಬೆಂಕಿ ಅವಘಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಲಡಾಖ್ ನ ಕಾರ್ಗಿಲ್ ಜಿಲ್ಲೆಯ ಪ್ರಮುಖ ಮಸೀದಿಯಲ್ಲಿಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದ ಬಹುತೇಕ ಭಾಗಗಳು ಹಾನಿಗೀಡಾಗಿವೆ.

ಕಾರ್ಗಿಲ್ ನ ಮದ್ರಾಸ್ನಲ್ಲಿರುವ ಜಾಮಿಯಾ ಮಸೀದಿಯ ಇಡೀ ಕಾಂಪೌಂಡ್ ಮತ್ತು ಕಟ್ಟಡವನ್ನು ಬೆಂಕಿ ಆವರಿಸಿದ್ದು, ಸದ್ಯಕ್ಕೆ ಬೆಂಕಿಯ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಸ ಸಿಬ್ಬಂದಿಗಳು ಜಾಮೀಯಾ ಮಸೀದಿಗೆ ಹೊತ್ತಿಕೊಂಡಿರುವಂತ ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!