BIG NEWS | ನಿಷೇಧಿತ ವಸ್ತು ಬಳಕೆ ಸಾಬೀತು: ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅಮಾನತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿಷೇಧಿತ ವಸ್ತು ಬಳಸಿರುವುದು ಸಾಬೀತಾಗಿದ್ದು, ಈ ಹಿನ್ನೆಲೆ 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ.

ಕರ್ಮಾಕರ್ ವಿಶ್ವ ಡೋಪಿಂಗ್ ಎಜೆನ್ಸಿ ನಿಷೇಧಿತ ವಸ್ತುಗಳಲ್ಲಿ ಸೇರಿಸಿರುವ ಹಿಜನಮೈನ್(S3. ಬೀಟಾ-2 ಅಗೊನಿಸ್ಟ್‌) ಸೇವಿಸಿರುವುದು ಡೋಪಿಂಗ್ ಟೆಸ್ಟ್‌ನಲ್ಲಿ ಸಾಬೀತಾಗಿದೆ. ಕರ್ಮಾಕರ್ ವರದಿ ಪಾಸಿಟೀವ್ ಬಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ITA) ದೀಪಾ ಕರ್ಮಾಕರ್ ಶಿಕ್ಷೆ ಪ್ರಕಟಿಸಿದೆ.

2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಫಲಿತಾಂಶ ಹೊರಬಿದ್ದಿತ್ತು. ಇದೀಗ ಶಿಕ್ಷೆ ಪ್ರಮಾಣ ಪ್ರಕಟಗೊಂಡಿದೆ. ಇಷ್ಟೇ ಅಲ್ಲ ಅಕ್ಟೋಬರ್ 11, 2021ರಂದು ದೀಪಾ ಕರ್ಮಾಕರ್ ಪಾಲ್ಗೊಂಡ ಕ್ರೀಡೆ ಫಲಿತಾಂಶಗಳನ್ನ ಅನರ್ಹಗೊಳಿಸಲಾಗಿದೆ.

2021ರ ಅಕ್ಟೋಬರ್‌‍ನಿಂದಲೇ ದೀಪಾ ಕರ್ಮಾಕರ್‌ಗೆ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಹೀಗಾಗಿ ಶಿಕ್ಷೆಯ ಬಹುತೇಕ ಭಾಗವನ್ನುಈಗಾಗಲೇ ಪೂರೈಸಿದ್ದು, 21 ತಿಂಗಳ ಕಾಲ ಶಿಕ್ಷೆ ಇದೇ ಜುಲೈ ತಿಂಗಳ 10ನೇ ತಾರಿಕಿಗೆ ಅಂತ್ಯಗೊಳ್ಳಲಿದೆ.

ದೀಪಾ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇಷ್ಟೇ ಅಲ್ಲ ಒಲಿಂಪಿಕ್ ಜಿಮ್ನಾಸ್ಟಿಕ್‌ ಕಂಪ್ಲೀಟ್ ಮಾಡಿದ ಭಾರತದ ಮೊದಲ ಜಿಮ್ನಾಸ್ಟ್ ಅನ್ನೋ ಹೆಗ್ಗಳಿಕೆಗೆ ದೀಪಾ ಕರ್ಮಾಕರ್ ಪಾತ್ರರಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!