Monday, July 4, 2022

Latest Posts

BIG NEWS | ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾಂಬ್​ ಸ್ಫೋಟ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್​ ಸ್ಫೋಟ ಸಂಭವಿಸಿದೆ . ಸ್ಫೋಟದಲ್ಲಿ ಸಾವು ನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಅಫ್ಘಾನ್ ನಾಗರಿಕರ ಜೊತೆಗೆ ಅಮೆರಿಕ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಇದ್ದರು ಎನ್ನಲಾಗಿದೆ. ಸಾವುನೋವು ಹಾಗೂ ಗಾಯಾಳುಗಳ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.
ತಾಲಿಬಾನ್ ಆಳ್ವಿಕೆಯಿಂದ ಪಲಾಯನ ಮಾಡಲು ಹವಣಿಸುತ್ತಿರುವ ಸಾವಿರಾರು ಅಫ್ಘಾನಿಸ್ಥಾನರು ತಂಗಿರುವ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಗುರುವಾರ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಏರ್ಪೋರ್ಟ್ ಬಳಿ ಭಾರಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ.
.ಈ ತಿಂಗಳ ಆರಂಭದಲ್ಲಿ ತಾಲಿಬಾನ್ ಸ್ವಾಧೀನಕ್ಕೆ ಬಂದ ನಂತರ ಸಾವಿರಾರು ಆಫ್ಘನ್ನರು ದೇಶದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಸ್ಫೋಟ ಸಂಭವಿಸಿದೆ. ಮೇಲ್ನೋಟಕ್ಕೆ ಇದು ಆತ್ಮಾಹುತಿ ಬಾಂಬ್​ ಎನಿಸುತ್ತದೆ. ಅಫ್ಘಾನ್ ನಾಗರಿಕರು ವಿಮಾನ ನಿಲ್ದಾಣ ಪ್ರವೇಶಿಸಲು ಮುಗಿಬಿದ್ದು, ನೂಕುನುಗ್ಗಲು ಉಂಟಾದ ವೇಳೆಯಲ್ಲಿಯೆ ಬಾಂಬ್ ಸ್ಫೋಟಿಸಿದೆ. ಬಾಂಬ್ ಸ್ಫೋಟಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರವೇಶ ದ್ವಾರದ ಬಳಿ ಅಫ್ಘಾನಿಗಳು ದೊಡ್ಡಸಂಖ್ಯೆಯಲ್ಲಿದ್ದರು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss