spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BIG NEWS | ಕೇಂದ್ರದಿಂದ ಗುಡ್ ನ್ಯೂಸ್: ರೆಮ್ ಡೆಸಿವಿರ್ ಬೆಲೆಯಲ್ಲಿ ಕಡಿತ!

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್-19 ರೋಗಿಗಳಿಗೆ ಜೀವರಕ್ಷಕವಾಗಿರುವ ರೆಮ್ ಡೆಸಿವಿರ್ ಪ್ರತಿ ಇಂಜೆಕ್ಷನ್ ಬೆಲೆಯನ್ನು ಕೇಂದ್ರ ಸರ್ಕಾರ 2000 ರೂಪಾಯಿಯಷ್ಟು ಕಡಿತ ಮಾಡಿದೆ.

ರಾಸಾಯನಿಕ ರಸಗೊಬ್ಬರಗಳ ಸಚಿವಾಲಯ ಔಷಧ ವಿಭಾಗದ ಸದಸ್ಯ ಸಲಹೆಗಾರ ಡಾ. ವಿನೋದ್ ಕೊತ್ವಾಲ್ ಅವರು ಶನಿವಾರ ಪರಿಷ್ಕೃತ ಬೆಲೆಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಂಟಿ ವೈರಲ್ ಔಷಧಿಯನ್ನು 899 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ.

ದೇಶದಲ್ಲಿ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಹೋರಾಡುತ್ತಿದ್ದಂತೆ ಇಂಜೆಕ್ಷನ್ ತಯಾರಕರು ಆಂಟಿ-ವೈರಲ್ ಡ್ರಗ್ ರೆಮ್ ಡೆಸಿವಿರ್ ಕೊರತೆಯ ಮಧ್ಯೆ ಬೆಲೆಯನ್ನು ಕಡಿತಗೊಳಿಸಿದ್ದಾರೆ. ಉತ್ಪಾದನೆ ಮತ್ತು ಪೂರೈಕೆಯ ಹೆಚ್ಚಳ ಮತ್ತು ರೆಮ್‌ ಡೆಸಿವಿರ್ ಚುಚ್ಚುಮದ್ದಿನ ಬೆಲೆಯನ್ನು ಕಡಿಮೆ ಮಾಡಲು ಚರ್ಚಿಸಲು ಕೇಂದ್ರವು ಅಸ್ತಿತ್ವದಲ್ಲಿರುವ ಎಲ್ಲಾ ಔಷಧ ತಯಾರಕರೊಂದಿಗೆ ಸಭೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.

ಆಂಟಿ-ವೈರಲ್ ಔಷಧ ರೆಮ್ ಡೆಸಿವಿರ್ ಗೆ ಬೇಡಿಕೆ ಹೆಚ್ಚಾಗಿದ್ದು, ಕೇಂದ್ರವು ಏಪ್ರಿಲ್ 11 ರಂದು ರೆಮ್ ಡೆಸಿವಿರ್ ಮತ್ತು ಇತರೆ ಸಕ್ರಿಯ ಔಷಧ ಪದಾರ್ಥಗಳ ರಫ್ತು ನಿಷೇಧಿಸಿದೆ. ಕೊರೋನಾ ಪರಿಸ್ಥಿತಿ ಸುಧಾರಿಸುವವರೆಗೆ ರೆಮ್ ಡೆಸಿವಿರ್ ಇಂಜೆಕ್ಷನ್ ಮತ್ತು ರೆಮ್ ಡೆಸಿವಿರ್ ಆಕ್ಟಿವ್ ಫಾರ್ಮಾಸ್ಯುಟಿಕಲ್ ಪದಾರ್ಥಗಳ ರಫ್ತು ಮಾಡುವುದನ್ನು ಭಾರತ ಸರ್ಕಾರ ನಿಷೇಧಿಸಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪರಿಷ್ಕೃತ ಬೆಲೆಗಳ ಹೊಸ ಪಟ್ಟಿ:

  • ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ REMDAC 2,800 ರೂ.ನಿಂದ 899 ರೂ. ವರೆಗೆ
  • ಸಿಂಜೀನ್ ಇಂಟರ್ನ್ಯಾಷನಲ್ ಲಿಮಿಟೆಡ್(ಬಯೋಕಾನ್ ಬಯೋಲಾಜಿಕ್ಸ್ ಇಂಡಿಯಾ) ರೆಮ್ವಿನ್ 3,950 ರೂ.ನಿಂದ 2,450 ರೂ.
  • ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಲಿಮಿಟೆಡ್ ರೆಡಿಎಕ್ಸ್ 5,400 ರೂ.ನಿಂದ 2,700 ರೂ.ಗೆ
  • ಸಿಪ್ಲಾ ಲಿಮಿಟೆಡ್ ಸಿಪ್ರೆಮಿ 4,000 ರೂ.ನಿಂದ 3,000 ರೂ.ವರೆಗೆ
  • ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಡೆಸ್ರೆಮ್ 4,800 ರೂ.ನಿಂದ 3,400 ರೂ.ವರೆಗೆ
  • ಜುಬಿಲೆಂಟ್ ಜೆನೆರಿಕ್ಸ್ ಲಿಮಿಟೆಡ್ ಜುಬಿ-ಆರ್ 4,700 ರೂ.ನಿಂದ 3,400 ರೂ. ಗೆ
  • ಹೆಟೆರೊ ಹೆಲ್ತ್ ಕೇರ್ ಲಿಮಿಟೆಡ್ COVIFOR 5,400 ರೂ.ನಿಂದ 3,490 ರೂ.ಗೆ ಇಳಿಕೆಯಾಗಿದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss