Wednesday, June 29, 2022

Latest Posts

BIG NEWS | ಮತ್ತೊಂದು ಕೊರೋನಾ ಲಸಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟ ಕೇಂದ್ರ ಸರಕಾರ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸೋಂಕು ಒಂದೆಡೆ ಹೆಚ್ಚುತ್ತಿದ್ದು, ಮತ್ತೊಂದೆಡೆ ಶೋಕಿಗೆ ಲಸಿಕೆಗಳ ಸಂಖ್ಯೆ ಅಧಿಕವಾಗುತ್ತಿದೆ. ಇಷ್ಟು ದಿನಗಳ ಕಾಲ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನು ನೀಡುತ್ತಿದ್ದ ಕೇಂದ್ರ ಸರ್ಕಾರ ಇದೀಗ ದೇಶದಲ್ಲಿ ಮತ್ತೊಂದು ಲಸಿಕೆಯ ಬಳಕೆಗೆ ಅನುಮತಿ ನೀಡಿದೆ.
ಕೇಂದ್ರ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರ ಈ ಸಂಬಂಧ ಸಭೆ ನಡೆಸಿದ್ದು ಸಭೆಯಲ್ಲಿ ರಷ್ಯಾದ ʼಸ್ಪುಟ್ನಿಕ್​ ವಿʼ ಲಸಿಕೆಯನ್ನು ದೇಶದಲ್ಲಿ ತುರ್ತು ಬಳಕೆ ಮಾಡಲು ಅನುಮೋದನೆ ನೀಡಿದೆ.
ಸ್ಪುಟ್ನಿಕ್​ ವಿ ಲಸಿಕೆಯನ್ನು ಭಾರತದಲ್ಲಿ ಬಳಕೆಗೆ ತುರ್ತು ಅನುಮೋದನೆ ಕೋರಿ ಡಾ. ರೆಡ್ಡೀಸ್​ ಲ್ಯಾಬೋರೇಟರಿ ಅನುಮತಿ ಕೇಳಿತ್ತು. ರಷ್ಯಾದ ಈ ಲಸಿಕೆಯನ್ನುಭಾರತ, ರಷ್ಯಾ, ಯುಎಇ ಸೇರಿದಂತೆ ವಿವಿಧೆಡೆ ಪ್ರಾಯೋಗಿಕ ಪರೀಕ್ಷೆಯನ್ನ ನಡೆಸಲಾಗಿದೆ. ಇಲ್ಲಿಯವರೆಗೆ ಕೊರೋನಾ ವಿರುದ್ಧ 91.6 ಪ್ರತಿಶತ ಪರಿಣಾಮಕಾರತ್ವವನ್ನು ತೋರಿಸಿದೆ. ರಷ್ಯಾ ಡೈರೆಕ್ಟ್​ ಇನ್​ವೆಸ್ಟ್​​ಮೆಂಟ್​ ಫಂಡ್​ ಜೊತೆ ಡಾ. ರೆಡ್ಡಿಸ್​​ ಸಹಭಾಗಿತ್ವ ಹೊಂದಿದೆ.
ಭಾರತದಲ್ಲಿ ಇಲ್ಲಿಯವರೆಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ಬಳಕೆ ಮಾಡಲಾಗುತ್ತಿತ್ತು. ದೇಶದಲ್ಲಿಕೊರೋನಾ ಎರಡನೇ ಅಲೆಯ ಆರ್ಭಟ ನಡೆಯುತ್ತಿದ್ದು ಈ ಸಮಯದಲ್ಲೇ ಭಾರತದ ವಿವಿಧ ರಾಜ್ಯಗಳಲ್ಲಿ ಲಸಿಕೆ ಅಭಾವ ಕಾಣಿಸಿಕೊಳ್ತಿದೆ. ಈ ಸಮಸ್ಯೆಯನ್ನ ತಡೆಗಟ್ಟಲಿಕ್ಕೋಸ್ಕರ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss