BIG NEWS | ಇಯಾನ್ ಚಂಡಮಾರುತ ಭೀತಿ: ಫ್ಲೋರಿಡಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತವು ವೇಗವನ್ನು ಪಡೆದಿದ್ದು, ಶೀಘ್ರದಲ್ಲೇ ಪ್ರಮುಖ ಚಂಡಮಾರುತವಾಗಿ ಪರಿಣಮಿಸುವ ಮುನ್ಸೂಚನೆ ಇರುವ ಹಿನ್ನೆಲೆ ಗವರ್ನರ್ ರಾನ್ ಡಿಸಾಂಟಿಸ್ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಶುಕ್ರವಾರ 24 ಕೌಂಟಿಗಳಿಗೆ ತುರ್ತು ಆದೇಶವನ್ನು ನೀಡಿದ್ದ ಗವರ್ನರ್ ಇದೀಗ ಇಡೀ ರಾಜ್ಯಕ್ಕೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸಿದ್ದಾರೆ. ಚಂಡಮಾರುತದಿಂದ ಸುರಕ್ಷಿತವಾಗಿರಲು ಹಾಗೂ ಅದನ್ನು ಎದುರಿಸಲು ತಯಾರಾಗುವಂತೆ ಅಲ್ಲಿನ ನಿವಾಸಿಗಳನ್ನು ಮನವಿ ಮಾಡಿದ್ದಾರೆ.

ಈ ಚಂಡಮಾರುತದ ಸಂಭಾವ್ಯ ಪರಿಣಾಮಗಳನ್ನು ಪತ್ತೆಹಚ್ಚಲು ನಾವು ಎಲ್ಲಾ ರಾಜ್ಯ ಮತ್ತು ಸ್ಥಳೀಯ ಸರ್ಕಾರದ ಪಾಲುದಾರರೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಡಿಸಾಂಟಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದಿನ ವಾರದ ಮಧ್ಯಭಾಗದಲ್ಲಿ ಪಶ್ಚಿಮ ಕ್ಯೂಬಾದ ಮೇಲೆ ಮತ್ತು ಫ್ಲೋರಿಡಾದ ಪಶ್ಚಿಮ ಕರಾವಳಿ ಮತ್ತು ಫ್ಲೋರಿಡಾ ಪ್ಯಾನ್‌ಹ್ಯಾಂಡಲ್ ಕಡೆಗೆ ಚಲಿಸುವ ಮೊದಲು ಇಯಾನ್ ಬಲಗೊಳ್ಳುವ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಚಂಡಮಾರುತ ಕೇಂದ್ರ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!