spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BIG NEWS | ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಲಸಿತ್ ಮಲಿಂಗಾ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿದ್ದ ಶ್ರೀಲಂಕಾದ ಲಸಿತ್ ಮಲಿಂಗಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
2014ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್​ ಗೆದ್ದ ತಂಡದ ಕ್ಯಾಪ್ಟನ್​ ಆಗಿದ್ದ ಲಸಿತ್ ಮಲಿಂಗಾ, ಎಲ್ಲ ಮಾದರಿ ಕ್ರಿಕೆಟ್​ನಿಂದ 546 ವಿಕೆಟ್ ಪಡೆದುಕೊಂಡಿದ್ದಾರೆ. 2007ರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಐಸಿಸಿ ಕ್ರಿಕೆಟ್​ ವಿಶ್ವಕಪ್​​ನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದು, ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದರು.
38 ವರ್ಷದ ಮಲಿಂಗಾ 2011ರಲ್ಲಿ ಟೆಸ್ಟ್​ ಕ್ರಿಕೆಟ್​ ಹಾಗೂ 2019ರಲ್ಲಿ ಏಕದಿನ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದರು. ಆದರೆ ಸದ್ಯ ಟಿ-20 ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆದಿದ್ದ ವೇಗದ ಬೌಲರ್​ ಇದೀಗ ಅದರಿಂದಲೂ ವಿದಾಯ ಪಡೆದುಕೊಂಡಿದ್ದಾರೆ. ಈ ಮೂಲಕ ಸುಮಾರು 17 ವರ್ಷಗಳ ಕ್ರಿಕೆಟ್​ ವೃತ್ತಿ ಬದುಕಿಗೆ ಪೂರ್ಣ ವಿರಾಮ ನೀಡಿದ್ದಾರೆ.
ಮಲಿಂಗಾ ಹೊಂದಿರುವ ಯೂಟ್ಯೂಬ್​ ಚಾನಲ್ ಮೂಲಕ ನಿವೃತ್ತಿ ಘೋಷಣೆ ಮಾಡಿರುವ ಅವರು, 17 ವರ್ಷಗಳಲ್ಲಿ ಗಳಿಸಿರುವ ಅನುಭವ ಇನ್ಮುಂದೆ ಅಗತ್ಯವಿಲ್ಲ. ಏಕೆಂದರೆ ನಾನು ಟಿ-20 ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ. ಆದರೆ ಕ್ರಿಕೆಟ್​​​ ಚೈತನ್ಯ ಹೆಚ್ಚಿಸಲು ಬೆಳೆಯುತ್ತಿರುವ ಯುವ ಪೀಳಿಗೆಗೆ ಯಾವಾಗಲೂ ಬೆಂಬಲ ನೀಡುತ್ತೇನೆ. ಕ್ರಿಕೆಟ್​ ಪ್ರೀತಿಸುವ ಪ್ರತಿಯೊಬ್ಬರೊಂದಿಗೆ ನಾನು ಇರುತ್ತೇನೆ ಎಂದಿದ್ದಾರೆ.
೩0 ಟೆಸ್ಟ್​​ ಪಂದ್ಯಗಳಿಂದ 101 ವಿಕೆಟ್​, 226 ಏಕದಿನ ಪಂದ್ಯಗಳಿಂದ 338 ವಿಕೆಟ್​, 84 ಟಿ20 ಪಂದ್ಯಗಳಿಂದ 107 ವಿಕೆಟ್ ಪಡೆದುಕೊಂಡಿರುವ ಇವರು, ಐಪಿಎಲ್​ನಲ್ಲೂ ಮಿಂಚು ಹರಿಸಿದ್ದಾರೆ.
2009ರಿಂದ 2019ರವರೆಗಿನ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆಡಿರುವ 122 ಪಂದ್ಯಗಳಿಂದ 170 ವಿಕೆಟ್​​ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಸುಮಾರು 12 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್​ ತಂಡದ ಭಾಗವಾಗಿದ್ದ ಮಲಿಂಗಾ ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss