BIG NEWS | ಸ್ಟೋಕ್ಸ್‌ ಆಟಕ್ಕೆ ಶಾಕ್ ಆದ ಪಾಕ್: ಇಂಗ್ಲೆಂಡ್‌ ಮುಡಿಗೆ ಟಿ20 ವಿಶ್ವಕಪ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಲ್ರೌಂಡರ್ ಬೆನ್ ಸ್ಟೋಕ್ಸ್ ಬೊಂಬಾಟ್ ಬ್ಯಾಟಿಂಗ್ ನಿಂದ ಪಾಕಿಸ್ತಾನ ವಿರುದ್ದ ಫೈನಲ್ ನಲ್ಲಿ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್ ತನ್ನ ಮುಡಿಗೆ ಏರಿಸಿಕೊಂಡಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೊದಲ ಓವರ್‌ನಲ್ಲೇ ಅಲೆಕ್ಸ್‌ ಹೇಲ್ಸ್ ವಿಕೆಟ್ ಕಳೆದುಕೊಂಡಿತುಫಿಲ್ ಸಾಲ್ಟ್‌(10) ಔಟಾದರು. ನಾಯಕ ಜೋಸ್ ಬಟ್ಲರ್ 26 ರನ್‌ ಬಾರಿಸಿ ಹ್ಯಾರಿಸ್ ರೌಪ್‌ಗೆ ವಿಕೆಟ್‌ ಒಪ್ಪಿಸಿದರು.

45 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ ಇಂಗ್ಲೆಂಡ್‌ ತಂಡಕ್ಕೆ ಬೆನ್‌ ಸ್ಟೋಕ್ಸ್ ಹಾಗೂ ಹ್ಯಾರಿ ಬ್ರೂಕ್ 39 ರನ್‌ಗಳ ಜತೆಯಾಟವಾಡುವ ಮೂಲಕ ಆಸರೆಯಾದರು.

ಬ್ರೂಕ್ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಅತ್ಯಾಕರ್ಷಕ ಬ್ಯಾಟಿಂಗ್ ನಡೆಸಿದಆಲ್ರೌಂಡರ್ ಬೆನ್ ಸ್ಟೋಕ್ಸ್‌ ಇಂಗ್ಲೆಂಡ್ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಬೆನ್ ಸ್ಟೋಕ್ಸ್‌ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 52 ರನ್ ಬಾರಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!