Monday, July 4, 2022

Latest Posts

BIG NEWS | ರಷ್ಯಾದಿಂದ ಭಾರತಕ್ಕೆ ಬಂತು ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಷ್ಯಾದಿಂದ ಮೊದಲ ಹಂತದ ಸ್ಪುಟ್ನಿಕ್-ವಿ ಲಸಿಕೆ ಇಂದು ಭಾರತಕ್ಕೆ ಆಗಮಿಸಿದೆ.
ಕೊರೋನಾ ಸೋಂಕಿನ ಸಂಕಷ್ಟದಲ್ಲಿರುವ ಭಾರತಕ್ಕೆ, ದೇಶೀಯ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಜೊತೆಗೆ ಮತ್ತೊಂದು ಲಸಿಕೆ ಸೇರ್ಪಡೆಗೊಂಡಿದೆ.
ಈ ತಿಂಗಳಿನಿಂದ ದೇಶದ ಜನರಿಗೆ ಸ್ಪುಟ್ನಿಕ್-ವಿ ಲಸಿಕೆ ನೀಡಲು ಶುರುವಾಗಲಿದ್ದು, ಇಂದು 1.5 ಲಕ್ಷ ಡೋಸ್ ಬಂದಿದ್ದು, ಮೇ ತಿಂಗಳಿನಲ್ಲಿ 30 ಲಕ್ಷ ಡೋಸ್ ಬರಲಿದೆ. ಜೂನ್ 50 ಲಕ್ಷ ಡೋಸ್, ಜುಲೈ ನಲ್ಲಿ 1 ಕೋಟಿ ಡೋಸ್ ಸ್ಪುಟ್ನಿಕ್-ವಿ ಲಸಿಕೆ ಬರಲಿದೆ.
ಮೊದಲ ಹಂತದಲ್ಲಿ ಬಂದಿರುವಂತ ಲಸಿಕೆ ಬಳಿಸಿಕೊಂಡು, ದೇಶದಲ್ಲಿ ಕೊರೋನಾ ವಿರುದ್ಧದ ರಷ್ಯಾ ಸ್ಪುಟ್ನಿಕ್-ವಿ ಲಸಿಕೆ ನೀಡಿಕೆ ಅಭಿಯಾನ ಶುರುವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss