BIG NEWS | ವಿಯೆಟ್ನಾಂ ಅಧ್ಯಕ್ಷ ನ್ಗುಯೆನ್ ಕ್ಸುವಾನ್ ಫುಕ್ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿಯೆಟ್ನಾಂ ಅಧ್ಯಕ್ಷ (Vietnam President) ನ್ಗುಯೆನ್ ಕ್ಸುವಾನ್ ಫುಕ್ (Nguyen Xuan Phuc) ರಾಜೀನಾಮೆ ನೀಡಿದ್ದಾರೆ.

ತಮ್ಮನ್ನು ಅಧಿಕಾರದಿಂದ ವಜಾಗೊಳಿಸುವ ಮುನ್ನವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಡಳಿರೂಢ ಮತ್ತು ಅದರಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಗಳ ನಡುವಿನ ಬಿಕ್ಕಟ್ಟಿನಿಂದ ವಿಯೆಟ್ನಾಂ ಅಧ್ಯಕ್ಷ ನ್ಗುಯೆನ್ ಕ್ಸುವಾನ್ ಫುಕ್ ರಾಜೀನಾಮೆ ನೀಡಬೇಕಾಗಿದೆ. ಈ ಹಿಂದೆ ಅವರನ್ನು ವಜಾಗೊಳಿಸಬಹುದು ಎಂಬ ಊಹಾಪೋಹ ಉಂಟಾಗಿತ್ತು .

ಅವರ ಅಡಿಯಲ್ಲಿ ಸೇವೆ ಸಲ್ಲಿಸಿದ ಇಬ್ಬರು ಉಪ ಪ್ರಧಾನ ಮಂತ್ರಿಗಳನ್ನು ವಜಾಗೊಳಿಸಿದ ನಂತರ ಫುಕ್ ಜನವರಿಯಲ್ಲಿ ಕೆಳಗಿಳಿಯುತ್ತಾರೆ ಎಂದು ಹೇಳಲಾಗಿತ್ತು, ಈ ಇಬ್ಬರು ಉಪ ಪ್ರಧಾನ ಮಂತ್ರಿಗಳ ರಾಜೀನಾಮೆ ನೀಡಲು ಅವರ ಪಕ್ಷದ ಆಂತರಿಕ ಬಿಕ್ಕಟ್ಟು ಕಾರಣ ಎಂದು ಹೇಳಲಾಗಿತ್ತು.

ನ್ಗುಯೆನ್ ಕ್ಸುವಾನ್ ಫುಕ್ ಅವರು 2016 ಮತ್ತು 2021 ರ ನಡುವೆ ದೇಶದ ಪ್ರಧಾನಿಯಾಗಿದ್ದರು. 2016-2021 ರ ಅವಧಿಯಲ್ಲಿ, ಅವರು COVID-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕಾಗಿ ಕೆಲಸ ಮಾಡಿದರು. 68 ವರ್ಷದ Phuc, ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಗೆ ಅಧ್ಯಕ್ಷರ ಪ್ರಮುಖ ಸ್ಥಾನವನ್ನು ಹೊಂದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!