Monday, July 4, 2022

Latest Posts

ಕೇಂದ್ರ ಸರ್ಕಾರದಿಂದ ‌ತೆರಿಗೆದಾರರಿಗೆ ಬಿಗ್‌ ರಿಲೀಫ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ತೆರಿಗೆಗೆ ಸಂಬಂಧಿಸಿದ ಗಡುವನ್ನು ಮೇ 31 ಕ್ಕೆ ವಿಸ್ತರಿಸಿದೆ.
ಈ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ತೆರಿಗೆ ಅನುಸರಣೆಗೆ ಸಂಬಂಧಿಸಿದಂತೆ ಹಲವಾರು ನಿಬಂಧನೆಗಳನ್ನ ಸಡಿಲಿಸಿದೆ.
‘ಪ್ರಸ್ತುತ ಕೋವಿಡ್-19 ಯಿಂದ ತೆರಿಗೆದಾರರು ಅನೇಕ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇದನ್ನ ಗಮನದಲ್ಲಿಟ್ಟುಕೊಂಡು, ಅವರ ಅನುಸರಣೆಗೆ ಸರ್ಕಾರ ಕಾಲಾವಧಿಯನ್ನು ವಿಸ್ತರಿಸಿದೆ ಎಂದು ತೆರಿಗೆ ಇಲಾಖೆಯ ಪರವಾಗಿ ಟ್ವಿಟರ್‌ ತಿಳಿಸಿದೆ.
ತೆರಿಗೆ ತಜ್ಞೆ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಗೌರಿ ಚಾಧಾ ಅವರು, ‘ಬಿಲ್ಟೆಡ್ ಮತ್ತು ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31 ರ ಗಡುವನ್ನು ನೀಡಲಾಗಿದೆ, ಅದನ್ನು ಈಗ ಮೇ 31 ಕ್ಕೆ ವಿಸ್ತರಿಸಲಾಗಿದೆ’ ಎಂದರು.
ಆದರೆ, ಆಯ್ದ ಟಿಡಿಎಸ್ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ. ಅಲ್ಲದೆ, ಸೆಕ್ಷನ್ 148ರ ಅಡಿಯಲ್ಲಿ ತೆರಿಗೆ ನೋಟಿಸ್ʼಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಆದಾಯ ತೆರಿಗೆಯನ್ನು ಸಡಿಲಿಸಲಾಗಿದೆ.

ತೆರಿಗೆ ಅನುಸರಣಾ ಗಡುವು ವಿಸ್ತರಣೆ:

  •  ಆದಾಯ ತೆರಿಗೆ ಕಾಯ್ದೆಯ ಅಧ್ಯಾಯ ಎಕ್ಸ್ ಎಕ್ಸ್ ಅಡಿಯಲ್ಲಿ, ಆಯುಕ್ತರಿಗೆ ಮೇಲ್ಮನವಿ ಸಲ್ಲಿಸುವ ಗಡುವು ಮೇ.31ರವರೆಗೆ ವಿಸ್ತರಿಸಲಾಗಿದೆ.
  •  ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 144 ಸಿʼಯ ವಿವಾದ ಪರಿಹಾರ ಸಮಿತಿ (ಡಿಆರ್ ಪಿ) ಅಡಿಯಲ್ಲಿ 2021ರ ಏಪ್ರಿಲ್ 1ರಂದು ಅರ್ಜಿ ಸಲ್ಲಿಸಲು ಅಂತಿಮ ಗಡುವಾಗಿತ್ತು. ಇದೀಗ ಕೊನೆಯ ದಿನಾಂಕವನ್ನು 31 ಮೇ 2021 ಕ್ಕೆ ನಿಗದಿ.
  • * ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ಪಡೆದ ನಂತರ ಏಪ್ರಿಲ್ 1, 2021ರಂದು ರಿಟರ್ನ್ಸ್ ಸಲ್ಲಿಸಲು ಮೊದಲು ಗಡುವಾಗಿತ್ತು. ಈಗ ಈ ಗಡುವನ್ನು 31 ಮೇ 2021ರವರೆಗೆ ವಿಸ್ತರಣೆ.
  • * ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139 ರ ಅಡಿಯಲ್ಲಿ, 2021-21 ರ ಹಣಕಾಸು ವರ್ಷದ ತೆರಿಗೆ ರಿಟರ್ನ್ಸ್ ಅನ್ನು ತಡವಾಗಿ ಹಿಂದಿರುಗಿಸಲು ಕೊನೆಯ ದಿನಾಂಕವನ್ನು 31 ಮಾರ್ಚ್ 2021 ರಿಂದ 31 ಮೇ 2021 ರವರೆಗೆ ವಿಸ್ತರಣೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss