Thursday, December 1, 2022

Latest Posts

ಫೇಸ್ ಬುಕ್ ಬಳಕೆದಾರರಿಗೆ ಬಿಗ್‌ ಶಾಕ್‌: ಮಾಯವಾಗುತ್ತಿದ್ದಾರೆ ಹಿಂಬಾಲಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಮಾಧ್ಯಮಗಳ ದೈತ್ಯ ಫೇಸ್ ಬುಕ್ ಇದೀಗ ವಿವಾದಕ್ಕೀಡಾಗಿದ್ದು, ರಾತ್ರೋರಾತ್ರಿ ಫೇಸ್‌ಬುಕ್‌ ಹಿಂಬಾಲಕರು ಮಾಯವಾಗ್ತಿದ್ದಾರಂತೆ.

ಹೌದು, ಅರ್ಧಕ್ಕೂ ಹೆಚ್ಚು ಫಾಲೋವರ್‌ಗಳು ಕಣ್ಮರೆಯಾಗ್ತಿದ್ದಾರೆ ಅಂತ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದೂರುತ್ತಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ಅವರಿಗೂ ಈ ಕಾಟ ತಪ್ಪಿಲ್ಲ. ಬರೋಬ್ಬರಿ 10 ಕೋಟಿ ಸನಿಹ ಫಾಲೋವರ್‌ಗಳನ್ನು ಹೊಂದಿದ್ದ ಜುಕರ್‌ಬರ್ಗ್‌ ಅವರನ್ನು ಈಗ ಕೇವಲ 9,995 ಜನರು ಹಿಂಬಾಲಿಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಬಹಳಷ್ಟು ಬಳಕೆದಾರರು ಈ ಬಗ್ಗೆ ಹೇಳುತ್ತಿದ್ದು, ತಮ್ಮ ಅನುಯಾಯಿಗಳ ಸಂಖ್ಯೆ ಇದ್ದಕ್ಕಿದ್ದಂತೆ ಕಡಿಮೆಯಾಗಿದೆ ಎಂದು ದೂರುತ್ತಿದ್ದಾರೆ. ಕೆಲವು ತಾಂತ್ರಿಕ ದೋಷ ಅಥವಾ ದೋಷದಿಂದಾಗಿ ಇದು ಸಂಭವಿಸಿದೆ ಎಂದು ನಂಬಲಾಗಿದೆ. ಆದಾಗ್ಯೂ, ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಮತ್ತು ಅದರ ಪರಿಹಾರವನ್ನು ಬಿಡುಗಡೆ ಮಾಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!