ಉದ್ಧವ್‌ ಠಾಕ್ರೆಗೆ ಬಿಗ್ ಶಾಕ್: ಮಹಾ ಸಿಎಂ ‘ಶಿಂಧೆ ಬಣ’ಕ್ಕೆ ಸಿಕ್ಕಿತು ಶಿವಸೇನೆಯ ಬಿಲ್ಲು-ಬಾಣ ಗುರುತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

‘ಶಿವಸೇನೆ’ ಪಕ್ಷ ಹೆಸರು ಮತ್ತು ಪಕ್ಷದ ಚಿಹ್ನೆ ‘ಬಿಲ್ಲು ಮತ್ತು ಬಾಣ’ ಅನ್ನು ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಹಂಚಿಕೆ ಮಾಡಿ ಭಾರತದ ಚುನಾವಣಾ ಆಯೋಗ (Election Commission)ಇಂದು ಆದೇಶಿಸಿದೆ.

ಈ ಮೂಲಕ ಬಿಜೆಪಿ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವ ಏಕನಾಥ್‌ ಶಿಂಧೆ (Eknath Shinde) ಅವರಿಗೆ ಭಾರಿ ಮುನ್ನಡೆ ಸಿಕ್ಕಿದೆ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯ ಮತ್ತೊಂದು ಬಣಕ್ಕೆ ಭಾರಿ ಹಿನ್ನಡೆಯಾಗಿದೆ.

ಮಹಾ ವಿಕಾಸ ಅಘಾಡಿ ಮೈತ್ರಿಯಿಂದ ಬಂಡಾಯವೆದ್ದಿದ್ದ ಏಕನಾಥ್‌ ಶಿಂಧೆ, 40ಕ್ಕೂ ಹೆಚ್ಚು ಶಾಸಕರನ್ನು ಸೆಳೆದು, ಶಿವಸೇನೆಯ ಮತ್ತೊಂದು ಬಣ ರಚಿಸಿ ಬಿಜೆಪಿ ಜೊತೆಗೂಡಿ ಸರಕಾರ ರಚಿಸಿತ್ತು.

ಬಳಿಕ ನಮ್ಮದೇ ನಿಜವಾದ ಶಿವಸೇನೆ ಎಂದು, ನಮಗೇ ಬಿಲ್ಲು ಮತ್ತು ಬಾಣದ ಗುರುತು ನೀಡಬೇಕು ಎಂದು ಎರಡೂ ಬಣಗಳು ಚುನಾವಣೆ ಆಯೋಗದ ಮೊರೆ ಹೋಗಿದ್ದವು. ಬಳಿಕ ಚುನಾವಣೆ ಆಯೋಗವು ಕಳೆದ ಉಪ ಚುನಾವಣೆಯಲ್ಲಿ ಎರಡೂ ಬಣಗಳಿಗೆ ಬೇರೆ ಚಿಹ್ನೆ ಹಾಗೂ ಹೆಸರು ನೀಡಿತ್ತು.
ಇದೀಗ ಏಕನಾಥ್‌ ಶಿಂಧೆ ಬಣವೇ ಮೂಲ ಶಿವಸೇನೆಯಾಗಿ ಹೊರಹೊಮ್ಮಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!