ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೆಲವೊಮ್ಮೆ ಹೀಗಾಗುತ್ತದೆ. ಆನ್ ಲೈನ್ ನಲ್ಲಿ ನಾವೇನೋ ಆರ್ಡರ್ ಮಾಡಿದರೆ ಇನ್ನೇನು ಬಂದಿರುತ್ತದೆ. ಮುಂಬೈ ನಿವಾಸಿ ಲೋಕೇಶ್ ದಗಾ ಅವರಿಗೂ ಕೂಡ ಹೀಗೆ ಆಗಿದೆ.
ಲೋಕೇಶ್ ಆನ್ ಲೈನ್ ಶಾಂಪಿಂಗ್ ಅಮೇಜಾನ್ ಡಾಟ್ ಕಾಮ್ನಲ್ಲಿ ನಲ್ಲಿ ಕೊಲ್ಗೇಟ್ ಮೌಥ್ವಾಶ್ ಆರ್ಡರ್ ಮಾಡಿದ್ದಾರೆ. ಆದರೆ ಆರ್ಡರ್ ಪ್ಯಾಕೇಜ್ ತೆರೆದಾಗ ಇದ್ದಿದ್ದು, ರೆಡ್ಮಿ ನೋಟ್ 10 ಫೋನ್.
ಲೋಕೇಶ್ ಮೌಥ್ ವಾಶ್ ಬುಕ್ ಮಾಡಿದ್ದಾಗಿ ಕೆಲವೊಂದು ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ಆರ್ಡರ್ ಬದಲಾಗಿರುವುದನ್ನು ಸೆಕ್ಯುರಿಟಿ ಗಾರ್ಡ್ ತಿಳಿಸಿದ್ದರು. ತೆರೆದು ನೋಡಿದಾಗ ಮೌಥ್ ವಾಶ್ ಬದಲು ರೆಡ್ ಮಿ ನೋಟ್ 10 ಫೋನ್ ಇರುವುದು ತಿಳಿದಿದೆ ಎಂದು ಹೇಳಿದ್ದಾರೆ.
ಆರ್ಡರ್ ಮರು ಬದಲಾವಣೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ರಿಟರ್ನ್ ಆ್ಯಪ್ ಮೂಲಕ ಸಾಧ್ಯವಾಗುತ್ತಿಲ್ಲ. ಇದೀಗ ಏನು ಮಾಡುವುದು? ಹೇಗೆ ಬದಲಾವಣೆ ಮಾಡುವುದು ಎಂದು ಗೊತ್ತಾಗುತ್ತಿಲ್ಲ ಎಂದು ಲೋಕೇಶ್ ಹೇಳಿದ್ದಾರೆ.