Monday, August 8, 2022

Latest Posts

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಗೆ ಒಲಿಯಿತು ಹೊಸ ಥ್ರಿಲ್ಲಿಂಗ್ ಪ್ರಾಜೆಕ್ಟ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಗ್ ಬಾಸ್ ಸೀಸನ್ 8ರ ನಂತರ ಎಲ್ಲಾ ಸ್ಪರ್ಧಿಗಳು ತಮ್ಮ ಕೆರಿಯರ್ ನತ್ತ ಮುಖ ಮಾಡುತ್ತಿದ್ದು, ಅದರಂತೆ ದಿವ್ಯಾ ಸುರೇಶ್ ಕೂಡ ಇದೀಗ ಹೊಸ ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರಂತೆ.
ಈ ಬಗ್ಗೆ ದಿವ್ಯಾ ಸುರೇಶ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಪ್ರಾಜೆಕ್ಟ್ ನಿಮಿತ್ತ ದಿವ್ಯಾ ಸ್ಟಂಟ್ಸ್ ಅಭ್ಯಾಸ ಮಾಡುತ್ತಿದ್ದು, ಅದರ ತರಬೇತಿಯಲ್ಲಿ ಬ್ಯುಸಿಯಾಗಿದ್ದಾರೆ.
ಈ ವಿಚಾರವಾಗಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ಹೊಸ ಪ್ರಾಜೆಕ್ಟ್ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಸ್ಟಂಟ್ ಅಭ್ಯಾಸ ಮಾಡುತ್ತಿದ್ದು, ಥ್ರಿಲಿಂಗ್ ಆಗಿದೆ ಎಂದು ಅಡಿಬರಹಗಳನ್ನು ಹ್ಯಾಷ್ ಟ್ಯಾಗ್ ಮೂಲಕ ಬರೆದುಕೊಂಡಿದ್ದಾರೆ. ಆದರೆ ಈ ಪ್ರಾಜೆಕ್ಟ್ ಯಾವುದು ಎಂದು ಬಹಿರಂಗಗೊಳಿಸಿಲ್ಲ.
ಇಷ್ಟು ದಿನ ಕೈಗೆತ್ತಿಕೊಂಡ ಪ್ರಾಜೆಕ್ಟ್ ಪೂರ್ಣವಾಗದ ಬೇಸರದಲ್ಲಿದ್ದ ದಿವ್ಯಾ ಸುರೇಶ್ ಸಂಪೂರ್ಣ 120 ದಿನ ಬಿಗ್ ಬಾಸ್ ಮನೆಯಲ್ಲಿರುವ ಮೂಲಕ ಮತ್ತಷ್ಟು ಛಲ ಪಡೆದಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಫುಲ್ ಖುಷಿಯಾಗಿದ್ದು, ಶುಭಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss