ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ ತಾಯಿ ಸರೋಜಾ ಅವರು ಇಂದು ಕೊನೆಯುಸಿರೆಳೆದಿದ್ದು, ಸಿನಿ ಸೆಲೆಬ್ರಿಟಿಗಳು ಅಂತಿಮ ದರುಶನ ಪಡೆದಿದ್ದಾರೆ.
ಸುದೀಪ್ ತಾಯಿಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನಟನ ಮನೆಗೆ ತೆರಳಿ ಬಿಗ್ ಬಾಸ್ ಕನ್ನಡ 10ರ ವಿನ್ನರ್ ಕಾರ್ತಿಕ್ ಮಹೇಶ್ , ವಿನಯ್ ಗೌಡ , ಸಿರಿ, ತುಕಾಲಿ ಸಂತೋಷ್ ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಆರ್ಯವರ್ಧನ್ ಗುರೂಜಿ, ರಂಜಿತ್ ಕೂಡ ಆಗಮಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಸರೋಜ ಅವರ ಆತ್ಮಕ್ಕೆ ಶಾಂತಿ ಕೋರಿ ಪೋಸ್ಟ್ ಮಾಡಿದ್ದಾರೆ, ಹಾಗೂ ಸುದೀಪ್ ಅವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕೋರಿದ್ದಾರೆ.