Thursday, February 29, 2024

BIG BOSS | ಬಿಗ್‌ಬಾಸ್‌ಗೆ ಪ್ರತಾಪ್‌ಗಿಂತ ಸಂಗೀತಾ ಇಷ್ಟ! ವೀಕ್ಷಕರಿಗೆ ಈ ಅನುಮಾನ ಕಾಡಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್‌ನಲ್ಲಿ ಈ ವಾರಿ ಟಿಕೆಟ್ ಟು ಫಿನಾಲೆ ಕಾನ್ಸೆಪ್ಟ್ ಇಟ್ಟುಕೊಂಡು ಟಾಸ್ಕ್‌ಗಳನ್ನು ನೀಡಲಾಗಿತ್ತು.

ಇದರಲ್ಲಿ ಗೆದ್ದವರನ್ನು ನೇರ ಫಿನಾಲೆಗೆ ಕಳಿಸುವುದಾಗಿ ಬಿಗ್‌ಬಾಸ್ ಹೇಳಿತ್ತು. ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರಿಗೆ ಬಿಗ್‌ಬಾಸ ಫಿನಾಲೆ ಟಿಕೆಟ್ ಸಿಗಲಿದೆ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು.

ಆದರೆ ಎಲ್ಲರಿಗಿಂತ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದು ಪ್ರತಾಪ್, ಟಿಕೆಟ್ ಟು ಫಿನಾಲೆ ಸಿಕ್ಕಿದ್ದು ಸಂಗೀತಾಗೆ! ಟಾಸ್ಕ್ ಮುಗಿದ ನಂತರ ಮತ್ತೆ ವೋಟಿಂಗ್ ಮಾಡಿ ಸಂಗೀತಾರನ್ನು ಗೆಲ್ಲಿಸಲಾಗಿದೆ. ಬಿಗ್‌ಬಾಸ್‌ಗೆ ಪ್ರತಾಪ್ ಗೆಲ್ಲೋದು ಇಷ್ಟವಿರಲಿಲ್ಲ ಎಂದು ಅಭಿಮಾನಿಗಳು ಮಾತನಾಡ್ತಿದ್ದಾರೆ.

ಪ್ರತೀ ವಾರವೂ ಏನೇ ಸಮಸ್ಯೆಯಾದರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತದೆ. ಅದರ ಬಗ್ಗೆ ಸುದೀಪ್ ವೀಕೆಂಡ್‌ನಲ್ಲಿ ಮಾತಾಡ್ತಾರೆ. ಈ ಬಾರಿಯೂ ವೀಕೆಂಡ್‌ನಲ್ಲಿ ಈ ವಿಷಯ ಪ್ರಸ್ತಾವನೆ ಆಗಬೇಕು ಎಂದು ಫ್ಯಾನ್ಸ್ ಹೇಳ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!