ಬಿಗ್ ಬಾಸ್ ಪ್ರೋಮೋ ರಿಲೀಸ್: ಇದು ಟಿವಿ ಶೋ ನಾ, ಓಟಿಟಿ ಶೋ ನಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಬಿಗ್ ಬಾಸ್ ಪ್ರಿಯರಿಗೆ ಇದೀಗ ಮತ್ತೊಂದು ಅಪಡೇಟ್ ಇದ್ದು, ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಅಲ್ಲ, ಇದು ಓಟಿಟಿ 1 ಎಂದು ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ.
‘ಇದು ಟಿವಿ ಶೋ ಅಲ್ಲ, ಜೀವನ. ಇದು ಬಿಗ್ ಬಾಸ್ ಕನ್ನಡ ಸೀಸನ್ 9 ಅಲ್ಲ, 1 ಇದು. ಈ ಹಿಂದೆ 24 ಗಂಟೆ ಬಿಗ್ ಬಾಸ್ ಬರುತ್ತಿತ್ತಾ? ವೂಟ್‌ನಲ್ಲಿ ಮಾತ್ರ ಬರುತ್ತಿತ್ತಾ? ಇಲ್ಲ ಅಲ್ವಾ? ಹಾಗಾಗಿ ಇದು ಓಟಿಟಿ ಶೋ 1. ಆಗಸ್ಟ್ 6 ರಿಂದ ಬಿಗ್ ಬಾಸ್ ಓಟಿಟಿ ಶೋ ವೂಟ್‌ನಲ್ಲಿ ಮಾತ್ರ ಬರುತ್ತದೆ ಎಂದು ಕಿಚ್ಚ ಸುದೀಪ್ ಹೇಳುತ್ತಾರೆ.

ಈ ಹಿಂದೆ ಕನ್ನಡದಲ್ಲಿ ಮೂಡಿ ಬಂದ ಬಿಗ್ ಬಾಸ್ ಪ್ರೋಮೋಗಳು ತುಂಬ ವಿಭಿನ್ನವಾಗಿ ಮೂಡಿ ಬಂದಿವೆ. ಅಂತೆಯೇ ಈ ಬಾರಿ ಕೂಡ ವಿಶೇಷವಾಗಿ ಮೂಡಿ ಬಂದಿವೆ.

ಸುದೀಪ್‌ಗಾಗಿ ಜನರು ಕಾಯುತ್ತಿರುತ್ತಾರೆ, ಈ ವೇಳೆಗೆ ಕಿಚ್ಚ ಸುದೀಪ್ ಎಂಟ್ರಿಯಾಗುತ್ತದೆ. ಅಲ್ಲಿ ನೆರೆದಿರುವವರೆಲ್ಲ ಕಿಚ್ಚ ಎಂದು ಕೂಗುತ್ತಾರೆ, ಜೈಕಾರ ಹಾಕುತ್ತಾರೆ, ಅಷ್ಟೇ ಅಲ್ಲ ಕಾರ್‌ಗಳ ಮೇಲೆ ಸುದೀಪ್ ನಿಲ್ಲುತ್ತಾರೆ, ರೆಡ್ ಕಾರ್ಪೆಟ್‌ನಲ್ಲಿಯೂ ಅವರು ಹೆಜ್ಜೆ ಹಾಕುತ್ತಾರೆ.

ಉತ್ಸಾಹದಿಂದ ಕೂಡಿದ 8 ಸೀಸನ್‌ಗಳಲ್ಲಿ ಭಾಗಿಯಾದ ನಂತರ ಬಿಗ್ ಬಾಸ್ ಕನ್ನಡ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ವರ್ಷ ಮೊಟ್ಟ ಮೊದಲನೆಯ ಒಟಿಟಿ ಆವೃತ್ತಿಯ ಮೂಲಕ ಮನರಂಜನೆಯಲ್ಲಿ ಕಥೆಗೆ ಟ್ವಿಸ್ಟ್ ತರಲು ಬಹಳ ಸಂತೋಷ ಹೊಂದಿದ್ದೇವೆ. ನಾವು ವೂಟ್‍ನಲ್ಲಿ ಈ ಶೋ ಪ್ರದರ್ಶನಕ್ಕೆ ಸಜ್ಜಾಗಿದ್ದು ನಾನು ವೀಕ್ಷಕರಿಗೆ 24/7 ಲೈವ್ ಆಕ್ಷನ್, ಆಸಕ್ತಿದಾಯಕ ಸಂವಹನಗಳು ಮತ್ತು ಪ್ಲಾಟ್ ಟ್ವಿಸ್ಟ್‌ಗಳನ್ನು ವೀಕ್ಷಕರಿಗೆ ತರಲು ಉತ್ಸುಕನಾಗಿದ್ದೇನೆ, ಇದು ನಮ್ಮ ವೀಕ್ಷಕರನ್ನು ಸೆಳೆಯುತ್ತದೆ ಎಂಬ ಭರವಸೆ ನನ್ನದು ಕೆಚ್ಚ ಎಂದರು.

ಇನ್ನು ಯಾರು ಯಾರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಬಗ್ಗೆ ರಿವೀಲ್ ಆಗಿಲ್ಲ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!