Monday, August 15, 2022

Latest Posts

ಬಿಗ್​ಬಾಸ್​ ಸೀಸನ್​ 8 ಅದ್ಧೂರಿ ಆರಂಭ: ಮನೆಗೆ ಕಾಲಿಟ್ಟ ನಟ ಅಶ್ವತ್ಥ್, ಶುಭಾ ಪೂಂಜಾ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕನ್ನಡದ ಬಹುನಿರೀಕ್ಷಿತ ಬಿಗ್​ಬಾಸ್​ ಸೀಸನ್​ 8 ಅದ್ಧೂರಿ ಆರಂಭವಾಗಿದ್ದು, ನಟ ಸುದೀಪ್​ ಸಾರಥ್ಯದಲ್ಲಿ ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ತೆಗೆದುಕೊಳ್ಳಲಾರಂಭಿಸಿದ್ದಾರೆ.
ಟಿಕ್​ಟಾಕ್​ ಸ್ಟಾರ್​ ಧನುಶ್ರೀ ಬಿಗ್​ಬಾಸ್​ ಮನೆಗೆ ಮೊದಲ ಎಂಟ್ರಿ ಪಡೆದಿದ್ದಾರೆ. ಪರಾರಿ, ಮೊಗ್ಗಿನ ಮನಸ್ಸು ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸಿರುವ ನಟಿ ಶುಭಾ ಪೂಂಜಾ ಎರಡನೇ ಸ್ಪರ್ಧಿಯಾಗಿ ಮನೆಯೊಳಗೆ ತೆರಳಿದ್ದಾರೆ. ಹಿರಿಯ ನಟ ಅಶ್ವತ್ಥ್​ ನಾರಾಯಾಣ 3ನೇ ಅಭ್ಯರ್ಥಿಯಾಗಿ ಮನೆಗೆ ಪ್ರವೇಶಿಸಿದ್ದಾರೆ.
ಈನು ಕಲರ್ಸ್​ ಕನ್ನಡದಲ್ಲಿ ಮೂಡಿಬಂದ ‘ಹಾಡು ಕರ್ನಾಟಕ’ ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಪಡೆದಿದ್ದ ಗಾಯಕ, ಧಾರವಾಡದ ವಿಶ್ವನಾಥ್​ ನಾಲ್ಕನೇ ಸ್ಪರ್ಧಿಯಾಗಿ ಮನೆ ಸೇರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss