Wednesday, August 10, 2022

Latest Posts

ಇಂದಿನಿಂದ ಬಿಗ್ ಬಾಸ್ ಸೀಸನ್ ಎಂಟರ ಅಸಲಿ ಆಟ ಆರಂಭ: ಪ್ರೇಕ್ಷಕರಿಂದ ನಿರ್ದೇಶಕರಿಗೆ ಹೀಗೊಂದು ಒತ್ತಾಯ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 8 ನಿನ್ನೆ ಆರಂಭವಾಗಿದ್ದು, 17 ಜನ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಆತ್ಮೀಯಾಗಿ ಬರಮಾಡಿಕೊಂಡು ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ.

ಇಂದಿನಿಂದ “ಬಿಗ್ ಬಾಸ್” ಮನೆಯಲ್ಲಿ ಅಸಲಿ ಆಟ ಆರಂಭವಾಗಲಿದ್ದು, ಹೀಗಿರುವಾಗ ಶೋ ಪ್ರಸಾರ ಮಾಡುವ ಸಮಯವನ್ನು ಬದಲಾವಣೆ ಮಾಡುವಂತೆ “ಬಿಗ್ ಬಾಸ್” ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.

ಹೌದು… ಬಿಗ್ ಬಾಸ್ ಆರಂಭವಾಗಿರುವುದಕ್ಕೆ ನಮಗೆ ಖುಷಿ ಇದೆ. ಆದರೆ ರಾತ್ರಿ 9.30ಕ್ಕೆ ಕಾರ್ಯಕ್ರಮ ಆರಂಭವಾಗುವ ಬಗ್ಗೆ ಬೇಸವಿದೆ.  ಕಚೇರಿಗೆ ಹೋಗುವವರಿಗೆ ಮತ್ತು ಮಕ್ಕಳಿಗೆ ಈ ಸಮಯ ಸರಿಯಿಲ್ಲ. ಹೀಗಾಗಿ ಶೋ ಅನ್ನು 8 ರಿಂದ 9 ಗಂಟೆಯವರೆಗೆ ಬದಲಾಯಿಸಿ ಎಂದು  ಬಿಗ್​ಬಾಸ್​ ಶೋ ನಿರ್ದೇಶಕ ಪರಮೇಶ್ವರ್​ ಗುಂಡ್ಕಲ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ​ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss