ಮತ್ತೊಂದು ಆಘಾತಕಾರಿ ಘಟನೆ: ನೂಪುರ್ ಹೇಳಿಕೆ ವಿಡಿಯೋ ನೋಡಿದಾತಗೆ ಚೂರಿ ಇರಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೂಪುರ್ ಶರ್ಮಾ ಹೇಳಿಕೆ ವಿಡಿಯೋ ನೋಡುತ್ತಿದ್ದ ವ್ಯಕ್ತಿ ಮೇಲೆ ಚೂರಿ ಇರಿತ ನಡೆಸಿದ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ.
ಅಂಕಿತ್ ಝಾ (23) ಹಲ್ಲೆಗೊಳಗಾದವರು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮೊಹಮ್ಮದ್ ನಿಹಾಲ್, ಮೊಹಮ್ಮದ್ ಬಿಲಾಲ್ ಸಹಿತ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಅಂಗಡಿಯೊಂದರ ಬಳಿ ಅಂಕಿತ್ ಝಾ ನೂಪುರ್ ಹೇಳಿಕೆಯ ವಿಡಿಯೋ ನೋಡುತ್ತಿದ್ದ ವೇಳೆ ಮತ್ತೊಬ್ಬ ಯುವಕ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಈ ವೇಳೆಬಮಾತಿನ ಚಕಮುಕಿ ನಡೆದಿದ್ದು, ಯುವಕ ಇತರರೊಂದಿಗೆ ಸೇರಿ ಅಂಕಿತ್ ಗೆ ಆರು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!