ನಿಲ್ಲಿಸಿದ ಲಾರಿಗೆ ಡಿಕ್ಕಿ ಹೊಡೆದ ಬೈಕ್: ಓರ್ವ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಿಲ್ಲಿಸಿದ ಲಾರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕಿನ ಗುರುವಾಯನಕರೆ ಸಮೀಪದ ಶಕ್ತಿನಗರ ಎಂಬಲ್ಲಿ ನಡೆದಿದೆ.

ಕೇರಳ ಮೂಲದ ವ್ಯಕ್ತಿ ಸೆಲ್ವ ರಾಜ್‌ (50) ಮೃತಪಟ್ಟ ವ್ಯಕ್ತಿ. ಮತ್ತೋರ್ವ ಗುರು ವಾಯನಕೆರೆ ಪೊಟ್ಟುಕೆರೆ ಬರಾಯ ಪಲ್ಕೆ ನಿವಾಸಿ ಲೋಕೇಶ್‌ ಗೌಡ ಗಾಯಗೊಂಡಿದ್ದಾರೆ.

ಸೆಲ್ವ ರಾಜ್‌ ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಲೋಕೇಶ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.

ಅಪಘಾತ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!