Thursday, August 11, 2022

Latest Posts

ಲಾರಿ- ಬೈಕ್‌ ನಡುವೆ ಡಿಕ್ಕಿ: ಮಹಿಳೆ ಸಾವು

ಹೊಸದಿಗಂತ ವರದಿ, ಮೈಸೂರು:

ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ನಗರ್ತಳ್ಳಿ ನಿವಾಸಿ ಮಹದೇವಮ್ಮ (48) ಮೃತಪಟ್ಟವರು.
ಗಾಯಗೊಂಡಿರುವ ಇವರ ಪುತ್ರ ವಿಜಯ್‌ಕುಮಾರ್ (28)ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಮಹದೇವಮ್ಮ ತಮ್ಮ ಪುತ್ರ ವಿಜಯ್‌ಕುಮಾರ್‌ನೊಂದಿಗೆ ಮೈಸೂರಿನ ಜೆ.ಪಿ.ನಗರ ಸಮೀಪದಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಕೆ.ಆರ್.ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss