ಹರ್‌ಘರ್ ತಿರಂಗಾ ಅಭಿಯಾನಕ್ಕೆ ಬೈಕ್‌ರ‍್ಯಾಲಿ : ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ

ಹೊಸದಿಗಂತ ವರದಿ ಚಿತ್ರದುರ್ಗ:
ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವ ಹರ್‌ಘರ್ ತಿರಂಗಾ ಅಭಿಯಾನಯಶಸ್ವಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೈಕ್‌ರ‍್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಹಾಗಾಗಿ ದೇಶಭಕ್ತಿ ಇರುವ ಯುವಕರನ್ನು ಬಡಿದೆಬ್ಬಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಕರೆ ನೀಡಿದರು.

ಬೈಕ್‌ರ‍್ಯಾಲಿ ಅಂಗವಾಗಿ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಪಕ್ಷದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹರ್‌ಘರ್ ತಿರಂಗಾ ಅಭಿಯಾನ ಬೈಕ್‌ರ‍್ಯಾಲಿ ಇಡಿ ರಾಜ್ಯಕ್ಕೆ ಮೊದಲನೆಯದಾಗಬೇಕು. ಕನಿಷ್ಟ ಐದು ಸಾವಿರ ಬೈಕ್‌ಗಳಾದರೂ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಹಾಗಾಗಿ ಎಲ್ಲರೂ ಸಿದ್ಧರಾಗಿ ಜನತೆಯ ಮನಪರಿವರ್ತನೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯನವರ ಜನ್ಮದಿನೋತ್ಸವಕ್ಕೆ ನಾವುಗಳ್ಯಾರೂ ಭಯಪಡುವ ಅಗತ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ನೀಡಿವೆ. ಅವುಗಳನ್ನೆಲ್ಲಾ ಮನೆ, ಮನೆಗೆ ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳಿದರು.

ಚಂದ್ರವಳ್ಳಿ ಮೈದಾನದಲ್ಲಿ ಆ.೧೦ ರಂದು ಬೈಕ್‌ರ‍್ಯಾಲಿಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಉದ್ಘಾಟಿಸುವರು. ಜಿಲ್ಲೆಯ ಎಲ್ಲಾ ಶಾಸಕರುಗಳು ಹಾಗೂ ಪಕ್ಷದ ಮುಖಂಡರುಗಳು ಪಾಲ್ಗೊಳ್ಳಲಿದ್ದಾರೆ. ನಗರದ ರಾಜಬೀದಿಗಳಲ್ಲಿ ಬೈಕ್‌ರ‍ ಸಂಚರಿಸಲಿರುವುದರಿಂದ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಹಿರಿಯರು ದೇಶಕ್ಕಾಗಿ ಸಮರ್ಪಿಸಿರುವ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಯುವ ಮುಖಂಡರುಗಳಾದ ಡಾ.ಸಿದ್ದಾರ್ಥ. ಜಿ.ಎಸ್.ಅನಿತ್ ಇವರುಗಳು ಬೈಕ್‌ರ‍್ಯಾಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಹರ್‌ಘರ್ ತಿರಂಗಾ ಅಭಿಯಾನ ಬೈಕ್‌ರ‍್ಯಾಲಿಯ ಸಂಚಾಲಕರುಗಳಾದ ರೇಖ, ಸಂಪತ್, ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿನಾಗರಾಜ್, ನಗರ ಮಂಡಲ ಅಧ್ಯಕ್ಷ ನವೀನ್‌ಚಾಲುಕ್ಯ, ಬಿಜೆಪಿ.ಜಿಲ್ಲಾ ಉಪಾಧ್ಯಕ್ಷ ಕಲ್ಲೇಶಯ್ಯ, ಕಲ್ಲಂಸೀತಾರಾಮರೆಡ್ಡಿ ವೇದಿಕೆಯಲ್ಲಿದ್ದರು. ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ವೀರೇಶ್‌ಜಾಲಿಕಟ್ಟೆ, ಉಪಾಧ್ಯಕ್ಷ ಮುಕ್ಕಣ್ಣ, ನಗರಸಭೆ ಸದಸ್ಯ ಹರೀಶ್ ಸೇರಿದಂತೆ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!