ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ್ಯೂಸ್ನ ಬೆಲೆ 40 ರೂ ಅಂದ್ರೆ ಒಪ್ಪಬಹುದು. ಆದರೆ ಜ್ಯೂಸ್ ಕುಡಿದ ಲೋಟಕ್ಕೆ 40 ರೂ ಬಿಲ್ ಹಾಕಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೆಸ್ಟೋರೆಂಟ್ ಗ್ರಾಹಕರು ಕೊಳ್ಳುವ ಜ್ಯೂಸ್ಗಳಿಗೆ ಬಿಲ್ ಹಾಕುವುದು ಮಾತ್ರಲ್ಲದೆ, ಜ್ಯೂಸ್ ಕುಡಿದು ಬಿಸಾಡುವ ಪ್ಲಾಸ್ಟಿಕ್ ಲೋಟಕ್ಕೂ ಬರೋಬ್ಬರಿ 40 ರೂ. ಬಿಲ್ ಹಾಕುವ ಮೂಲಕ ಗ್ರಾಹಕರಿಂದ ಹಣ ಲೂಟಿ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೆ. ಈ ಪ್ಲಾಸ್ಟಿಕ್ ಲೋಟಕ್ಕೂ ಬಿಲ್ ಹಾಕ್ತಾರೆ ಎಂಬ ವಿಚಾರ ತಿಳಿದು ಶಾಕ್ ಆದ ಗ್ರಾಹಕರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮುಂಬೈನ ಥಾಣೆಯ ವಿವಿಯನ್ ಮಾಲ್ನಲ್ಲಿರುವ ಶಾಹಿ ದರ್ಬಾರ್ ರೆಸ್ಟೋರೆಂಟ್ ಜ್ಯೂಸ್ ಜೊತೆಗೆ ಒಂದು ಪ್ಲಾಸ್ಟಿಕ್ ಲೋಟಕ್ಕೂ ಬರೋಬ್ಬರಿ 40 ರೂ. ಚಾರ್ಜ್ ಮಾಡಿದೆ. ಈ ಬಿಲ್ ಫೋಟೋವನ್ನು ಮುಂಬೈ ನಿವಾಸಿ ರವಿ ಹಾಂಡಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜ್ಯೂಸ್ ಕುಡಿದ ಮೇಲೆ ಬಿಸಾಡುವಂತಹ ಪ್ಲಾಸ್ಟಿಕ್ ಗ್ಲಾಸ್ಗೆ 40 ರೂ. ಚಾರ್ಜ್ ಮಾಡುವವರಿದ್ದಾರೆಯೇ? ಮುಂಬೈ ತುಂಬಾ ದುಬಾರಿ ಎಂದು ಗೊತ್ತಿತ್ತು, ಆದ್ರೆ ಹಿಂಗೆ ಅನ್ನೋ ವಿಚಾರ ಗೊತ್ತಿರಲಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ರೆಸ್ಟೋರೆಂಟ್ ಬಿಲ್ ಫೋಟೋದಲ್ಲಿ ಒಂದು ಮ್ಯಾಂಗೋ ಜ್ಯೂಸ್ಗೆ 250 ರಂತೆ ಹಾಗೂ ಜ್ಯೂಸ್ ಕುಡಿದು ಬಿಸಾಡುವ ಪ್ಲಾಸ್ಟಿಕ್ ಲೋಟಕ್ಕೆ ಒಂದಕ್ಕೆ 40 ರೂ. ನಂತೆ ಜಾರ್ಚ್ ಮಾಡಿರುವಂತಹ ಶಾಕಿಂಗ್ ದೃಶ್ಯವನ್ನು ಕಾಣಬಹುದು.
Who the hell charges 40₹ for disposable plastic glasses to drink Mango juice in!
I knew Mumbai is expensive but this is ridiculous. pic.twitter.com/G1kPouHJCy
— Ravi Handa (@ravihanda) November 4, 2024