ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಾಗೂ ಪತ್ನಿ ಮಿಲಿಂದಾ ಗೇಟ್ಸ್ ದಂಪತಿ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.
ಹೌದು, ವಿಶ್ವದ ಶ್ರೀಮಂತ ದಂಪತಿ ಇದೀಗ ಬೇರೆಯಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರಿಬ್ಬರೇ ಟ್ವೀಟರ್ ನಲ್ಲಿ ಜಂಟಿ ಹೇಳಿಕೆ ನೀಡಿರುವ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ.
ನಮ್ಮ ಸಂಬಂಧದ ಬಗ್ಗೆ ತುಂಬಾ ಆಳವಾಗಿ ಚಿಂತನೆ ಮಾಡಿದ ಬಳಿಕ ನಾವು ನಮ್ಮ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ತೀರ್ಮಾನಿಸಿದ್ದೇವೆ. ಕಳೆದ 27 ವರ್ಷಗಳಲ್ಲಿ ಮೂರು ಮಕ್ಕಳನ್ನು ಉತ್ತಮವಾಗಿ ಬೆಳೆಸಿದ್ದೇವೆ. ವಿಶ್ವದ ಎಲ್ಲಾ ಜನರಿಗೆ ಅನುಕೂಲವಾಗುವಂತೆ ಅಡಿಪಾಯವನ್ನು ನಿರ್ಮಿಸಿದ್ದೇವೆ. ಇದನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲಿದ್ದೇವೆ. ಆದರೆ ನಮ್ಮ ದಾಂಪತ್ಯ ಜೀವನ ಒಟ್ಟಾಗಿ ಕಳೆಯೋದು ಸಾಧ್ಯವಿಲ್ಲ ಎಂದು ಅರಿತಿದ್ದೇವೆ. ನಮ್ಮ ಜೀವನದ ಮುಂದಿನ ಘಟ್ಟದಲ್ಲಿ ಜೊತೆಯಲ್ಲಿ ಇರುವುದು ಅಸಾಧ್ಯ.ನಮ್ಮ ಹೊಸ ಜೀವನ ನಡೆಸಲು ನಮ್ಮ ಕುಟುಂಬಕ್ಕೆ ಕೆಲವು ಪ್ರೈವಸಿಯ ಅಗತ್ಯ ಇದೆ ಎಂದು ಬಿಲ್ ಗೇಟ್ಸ್ ದಂಪತಿ ತಿಳಿಸಿದ್ದಾರೆ.
ಬಿಲ್ ಗೇಟ್ಸ್ ಹಾಗೂ ಮಿಲಿಂದಾ ದಂಪತಿ 1994ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.