Friday, July 1, 2022

Latest Posts

ದೇಶದಲ್ಲಿ ಜೈವಿಕ ಇಂಧನದ ಕ್ರಾಂತಿ ಆಗಬೇಕಿದೆ: ಎಚ್.ಯು. ತಳವಾರ್

ದಿಗಂತ ವರದಿ ಮಂಡ್ಯ:

ರೈತರು, ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಇಂಧನ ಸಿಗಬೇಕಾದೆ ದೇಶದಲ್ಲಿ ಜೈವಿಕ ಇಂಧನದ ಕ್ರಾಂತಿ ಅಗತ್ಯವಾಗಿ ಆಗಬೇಕಾಗಿದೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಯು. ತಳವಾರ್ ಹೇಳಿದರು.
ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೈವಿಕ ಇಂಧನ ಘಟಕ ಮತ್ತು ಜೈವಿಕ ಪದಾರ್ಥಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಇಂಧನ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರು ಜೀವನ ಸಾಗಿಸುವುದೇ ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜೈವಿಕ ಇಂಧನ ಹಾಗೂ ಜೈವಿಕ ಪದಾರ್ಥಗಳನ್ನು ತಯಾರಿಸಿ ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿರುವುದು ಒಳ್ಳೆಯ ಆಶಾದಾಯಕ ಬೆಳವಣಿಗೆ ಎಂದು ಶ್ಲಾಘಿಸಿದರು.
ಬಾಗಲಕೋಟೆ ಇಂಜಿನಿಯರಿಂಗ್ ಕಾಲೇಜಿನಲ್ಲೂ ಇದೇರೀತಿ ಜೈವಿಕ ಇಂಧನವನ್ನು ತಯಾರಿಸುತ್ತಿದ್ದು, ಇವೆರಡೂ ಕಾಲೇಜುಗಳು ಇತರೆ ತಾಂತ್ರಿಕ ಕಾಲೇಜುಗಳಿಗೆ ಮಾದರಿಯಾಗಿವೆ. ಈ ಎರಡೂ ಕಾಲೇಜುಗಳಿಗೆ ಇತರೆ ತಾಂತ್ರಿಕ ಕಾಲೇಜುಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭೇಟಿ ನೀಡಿ, ತರಬೇತಿ ಪಡೆಯುವ ಮೂಲಕ ತಮ್ಮ ತಮ್ಮ ಕಾಲೇಜುಗಳಲ್ಲೂ ಜೈವಿಕ ಇಂಧನ ಘಟಕಗಳನ್ನು ಸ್ಥಾಪಿಸಿ ಪರ್ಯಾಯ ಇಂಧನ ತಯಾರಿಸಬೇಕೆಂದು ಸಲಹೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss