ಹೊಸದಿಗಂತ ವರದಿ, ಕಲಬುರಗಿ:
ಖ್ಯಾತ ಉದ್ದೀಮೆದಾರರು ಹಾಗೂ ಬಸವ ಕಲ್ಯಾಣ ಬಿಜೆಪಿ ಮುಖಂಡರಾದ ಉಮೇಶ್ ಬಿರಬಿಟ್ಟೆ ಅವರು ಶ್ರೀ ರಾಮ ಮಂದಿರ ನಿಮಾ೯ಣಕ್ಕಾಗಿ 5 ಲಕ್ಷ 11 ಸಾವಿರ ರೂಪಾಯಿ ದೇಣಿಗೆಯನ್ನು ನೀಡಿದರು.
ದೇಶದ ಕೋಟ್ಯಾಂತರ ಫ್ರಭು ಶ್ರೀರಾಮ ಭಕ್ತರ ಆಶಯದಂತೆ ಆಯೋದ್ಯಯಲ್ಲಿ ಬೃಹತ್ ರಾಮ ಮಂದಿರ ನಿರ್ಮಾಣ ಮಾಡಲು ದೇಶಾದ್ಯಂತ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಪ್ರಾರಂಬಿಸಲಾಗಿದೆ. ಅದರಂತೆ ರಾಮ ಭಕ್ತರು ಸ್ವಯಂ ಪ್ರೇರಿತರಾಗಿ ಮಂದಿರ ನಿರ್ಮಿಸಲು ದೇಣಿಗೆ ನೀಡುತ್ತಿದ್ದಾರೆ.ಅದರಂತೆ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹವಾಗಬೇಕೆನ್ನುವ ಆಶಯ ನಮ್ಮದಾಗಿದೆ ಎಂದರು.
ಹಣಧ ಚೆಕ್ ನ್ನು ಬೀದರ್ ಆರ್ ಎಸ್ಎಸ್ ಪ್ರಮುಖರಾದ ಶ್ರೀ ಹಣಮಂತ ಜಿ, ನಾಗೇಶ ರೆಡ್ಡಿ, ಪ್ರಮೋದ ಸ್ವಾಮಿ, ರಾಮ ಮಿಶ್ರಾ, ಗಿರೀಶ ದೇಂಗಲೆ, ಪಪ್ಪು ಠಾಕೂರ, ಮನೋಜ ಗೋಖಲರ ಇವರ ಸಮ್ಮುಖದಲ್ಲಿ ನೀಡಲಾಯಿತು.
ಬಿರಬಿಟ್ಟೆ ಕುಟುಂಬದ ವತಿಯಿಂದ ಬಸವಕಲ್ಯಾಣ ತಾಲೂಕಿನ ಹಳ್ಳಿಗಳಿಗೆ ಬೇಟಿ ನೀಡಿ ಮಂದಿರ ನಿರ್ಮಿಸಲು ದೇಣಿಗೆ ನೀಡುವಂತೆ ಮನವಿ ಮಾಡುವ ಕಾರ್ಯ ನಡೆದಿದೆ.
ಉಮೇಶ ಬಿರಬಿಟ್ಟೆ ಅಟ್ಟೂರ ಅವರು ಸಹ ಜಿಲ್ಲೆಯ ಜನರಿಗೆ ಭವ್ಯವಾದ ರಾಮ ಮಂದಿರ ನಿರ್ಮಿಸಲು ಎಲ್ಲರೂ ದೇಣಿಗೆ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.