ಶಂಕರಾಚಾರ್ಯ ಮತ್ತು ಚಾಂಡಾಲ ಪ್ರಸಂಗ- ಎಂದಿಗೂ ಪ್ರಸ್ತುತ ಸಂದೇಶ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇರಳದ ಕಾಲಡಿಯಲ್ಲಿ ಎಂಟನೇ ಶತಮಾನದಲ್ಲಿ ಜನಿಸಿ, ಭಾರತದ ಉದ್ದಗಲಕ್ಕೂ ಸಂಚರಿಸಿ ಅದ್ವೈತ ತತ್ವವನ್ನು ಪಸರಿಸಿದ ಶಂಕರ ಭಗವತ್ಪಾದರ ಜನ್ಮದಿನವನ್ನು ವೈಶಾಖ ಶುಕ್ಲಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ.

ಇಂದಿನ ಈ ದಿನ ಅವರ ಬದುಕಿನೊಂದಿಗೆ ಬೆಸೆದುಕೊಂಡಿರುವ ಕತೆಯೊಂದು ಮರು ಸ್ಮರಣೆಗೆ ಯೋಗ್ಯ. ನಾನೇ ಬ್ರಹ್ಮ ಎಂಬ ತತ್ತ್ವವನ್ನು ಅಧ್ಯಾತ್ಮಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಆ ಮಟ್ಟದ ಅನುಭವ-ಅಧ್ಯಯನಗಳು ಬೇಕಾದಾವು. ಆದರೆ ಸಾಮಾಜಿಕ ಮಟ್ಟದಲ್ಲಿ ‘ಬೇಧವೆಣಿಸದ’ ಅದ್ವೈತವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಶಂಕರಾಚಾರ್ಯರು ಮತ್ತು ಜಾತಿಯ ದೃಷ್ಟಿಯಿಂದ ಕೆಳಗಿನ ಕುಲಕ್ಕೆ ಸೇರಿದ, ಸ್ಮಶಾನ ಕಾಯುತ್ತಿದ್ದ ಚಾಂಡಾಲ ಎಂಬುವವನ ನಡುವೆ ನಡೆಯಿತೆನ್ನಲಾದ ಈ ಕತೆಯೇ ಸಾಕು.

ಶಂಕರರು ನದಿಯಲ್ಲಿ ಸ್ನಾನ ಮಾಡಿಕೊಂಡು ವಾಪಸಾಗುತ್ತಿದ್ದಾಗ ಮಾರ್ಗಮಧ್ಯೆಯಲ್ಲಿ ಚಾಂಡಾಲ ಎದುರಾಗುತ್ತಾನೆ. ಆಗ ಶಂಕರರು ಕಸಿವಿಸಿಯ ಭಾವದೊಂದಿಗೆ ಆತನನ್ನು ಮಾರ್ಗದಿಂದ ಪಕ್ಕ ಸರಿಯುವಂತೆ ಆದೇಶಿಸುತ್ತಾರೆ. ಕತೆಯ ಪ್ರಕಾರ, ಆಗ ಚಾಂಡಾಲ ಹೇಳಿದ್ದ ಎನ್ನಲಾದ ಮಾತು- “ನೀವು ಪಕ್ಕ ಸರಿ ಎಂದು ಹೇಳುತ್ತಿರುವುದು ಈ ದೇಹಕ್ಕೋ ಅಥವಾ ಇಲ್ಲಿರುವ ಬ್ರಹ್ಮಕ್ಕೋ?”

ಆಗ ಶಂಕರರು ಜ್ಞಾನೋದಯವನ್ನು ಹೊಂದಿ, ಚಾಂಡಾಲನಿಗೆ ಕೈಮುಗಿಯುತ್ತಾರೆಂಬ ಕತೆಯಿದೆ. ಅರ್ಥಾತ್, ನಾನೇ ಬ್ರಹ್ಮ ಮತ್ತು ಬ್ರಹ್ಮವೇ ಜಗತ್ತನ್ನಾವರಿಸಿದೆ ಎಂದ ಮೇಲೆ, ಎಲ್ಲವೂ ಅದೇ ಬ್ರಹ್ಮವೇ ಆಗಿರುವಾಗ, ಯಾರಲ್ಲೂ ಬೇಧವೆಣಿಸಬಾರದು ಎಂಬುದಿಲ್ಲಿನ ತಾತ್ಪರ್ಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!