Thursday, August 18, 2022

Latest Posts

ಕೊಳಕು ಸಾಕ್ಸ್ ಗೂ ಬಂತು ಭಾರೀ ಬೇಡಿಕೆ: ಸಾವಿರಗಟ್ಟಲೆ ಕೊಟ್ಟು ಖರೀದಿ ಮಾಡುತ್ತಿರುವ ಉದ್ಯಮಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಒಬ್ಬೊಬ್ಬರಿಗೆ ಒಂದೊಂದು ರೀತಿ ಹವ್ಯಾಸವಿರುತ್ತದೆ. ಕೆಲವರ ಹವ್ಯಾಸ ಸಾಮಾನ್ಯವೆನಿಸಿದರೆ, ಇನ್ನು ಕೆಲವರದ್ದು ವಿಚಿತ್ರವೆನಿಸುತ್ತದೆ.

ಹೌದು.. ಇಲ್ಲೊಬ್ಬ 33 ವರ್ಷದ   ಉದ್ಯಮಿ ಇದ್ದಾನೆ. ಅವನ ಹವ್ಯಾಸ ಕೇಳಿದ್ರೆ ಒಂದು ಕ್ಷಣ ಶಾಕ್ ಆಗ್ತೀರಾ..! ಯಾಕೆಂದ್ರೆ ಅವನಿಗೆ ಕೊಳಕು ಸಾಕ್ಸ್  ಕಲೆಕ್ಟ್ ಮಾಡುವ ಹಾಬಿ ಇದ್ಯಂತೆ.

ಇದು ನಂಬುವುದಕ್ಕೆ ಅಸಾಧ್ಯವೆನಿಸಿದ್ರೂ ನೀವು ನಂಬಲೇ ಬೇಕು.. ಏಕೆಂದ್ರೆ ಈತ ಹಳೆಯ ಮತ್ತು ಕೊಳಕು ಸಾಕ್ಸ್ ಖರೀದಿಸಲು ತಿಂಗಳಿಗೆ 200 ಪೌಂಡ್ (ರೂ. 20,000) ಖರ್ಚು ಮಾಡುತ್ತಾನಂತೆ.

ಅಷ್ಟೇ ಅಲ್ಲ ಈತನಿಗೆ ಕೊಳಕು ಪಾದಗಳನ್ನು ನೋಡುವುದು ಕೂಡ ಬಹಳ ಇಷ್ಟವಂತೆ. ಹಾಗಾಗಿ ಕೊಳಕು ಪಾದಗಳುಳ್ಳವರ ಬಳಿ ಹಣ ನೀಡಿ ವಿಡಿಯೋ ಮಾಡಿಸಿಕೊಂಡು ಗಂಟೆಗಟ್ಟಲೆ ನೋಡುತ್ತಾನಂತೆ.

ಇನ್ನು ಸೆಲಿಬ್ರಿಟಿ, ಸ್ಪೆಷಲ್ ವ್ಯಕ್ತಿಗಳ ಕೊಳಕು ಸಾಕ್ಸ್ ಗೆ  60 (6,000 ರೂ.)  ಪೌಂಡ್, 70 (7,000 ರೂ.) ಪೌಂಡ್ ವರೆಗೂ ವ್ಯಯಿಸಿದ್ದಾನಂತೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!