ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕಲಬುರಗಿ:
ಸತತವಾಗಿ ಏಳು ವಷ೯ದಿಂದ ಪೆಟ್ರೋಲ್, ಡಿಸೇಲ್ ಹಾಗೂ ಎಲ್ಪಿಜಿ ದರವನ್ನು ಏರಿಸಿ ಜನಸಾಮಾನ್ಯರ ಮೇಲೆ ಕೇಂದ್ರ ಸಕಾ೯ರ ಹೊರೆ ಹಾಕುತ್ತಿದೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಅವರು ನಗರದ ಲಾಹೋಟಿ ಪೆಟ್ರೋಲ್ ಪಂಪ್ ಎದುರಿಗೆ ಕೇಂದ್ರ ಹಾಗೂ ರಾಜ್ಯ ಸಕಾ೯ರಜ ವಿರುದ್ಧ ಘೋಷಣೆ ಕೂಗಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ 20ರಿಂದ 60 ರೂಪಾಯಿ ಕಡಿಮೆ ಆದರೂ,ಕೇಂದ್ರ ಸಕಾ೯ರ ಪೆಟ್ರೋಲ್ ಬೆಲೆಯನ್ನು ಇಂದು ನೂರು ರೂಪಾಯಿ,ಗೆ ತಂದು ನಿಲ್ಲಿಸಿದೆ ಎಂದು ವಾಗ್ದಾಳಿ ನಡೆಸಿದರು.
ಕೊರೋನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ದರು, ನರೇಂದ್ರ ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ನವಲ ಸಕಾ೯ರ ಜನರ ಸಂಕಷ್ಟಕ್ಕೆ ಸ್ಪಂಧಿಸುತ್ತಿಲ್ಲ, 7 ವಷ೯ದಿಂದ ನಿರಂತರವಾಗಿ ಪೆಟ್ರೋಲ್,ಡೀಸೆಲ್ ಹಾಗೂ ಎಲ್ ಪಿಜಿ ದರ ಏರಿಸಿ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದರು.
ನರೇಂದ್ರ ಮೋದಿ ಅವರು ಚುನಾವಣಾ ಸಂದರ್ಭದಲ್ಲಿ ಪೆಟ್ರೋಲ್, ಡಿಸೆಲ್ ದರ ಕಡಿಮೆ ಮಾಡುವುದಾಗಿ ಆಶ್ವಾಸನೆ ಕೊಟ್ಟು, ಅವರ ಭಾವನೆ ಜೊತೆಗೆ ಆಟವಾಡಿದ್ದಾರೆ ಎಂದು ವಾಗ್ದಾಳಿ ನಡೆಸಿ ನಿಮ್ಮ ಮಾತಿನಂತೆ ನಡೆಯಿರಿ ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ.ಎಂ.ವೈ.ಪಾಟೀಲ್, ತಿಪ್ಪಣಪ್ಪಾ ಕಮಕನೂರ,ಅಧ್ಯಕ್ಷ ಜಗಧೇವ ಗುತ್ತೇದಾರ , ಮಾಜಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದರು.