ಬಿಜೆಪಿ ಅಲ್ಪಸಂಖ್ಯಾತರನ್ನು ಎಂದೂ ಕಡೆಗಣಿಸಿಲ್ಲ: ಇಬ್ರಾಹಿಂ ‌ಬಾಬು

ಹೊಸದಿಗಂತ ವರದಿ,ಬಳ್ಳಾರಿ:

ಭಾಜಪಾ ಅಲ್ಪಸಂಖ್ಯಾತರನ್ನು ಎಂದೂ ಕಡೆಗಣಿಸಿಲ್ಲ, ಹಿರಿಯರಾದ ಅಬ್ದುಲ್ ಕಲಾಂ ಅವರನ್ನು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಅಲಂಕರಿಸಿದ ಕೀರ್ತಿ ಪಕ್ಷಕ್ಕಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಇಬ್ರಾಹಿಂ ಬಾಬು ಅವರು ಹೇಳಿದರು.
ನಗರದ ಭಾಜಪ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ, ಅವರು ಅಲ್ಪಸಂಖ್ಯಾತರನ್ನು ಎಂದಿಗೂ ಪಕ್ಷದಲ್ಲಿ ಬೆಳೆಸೋಲ್ಲ ಎನ್ನುವುದು ಶುದ್ದ ಸುಳ್ಳು, ಇದಕ್ಕೆ ನಾನೇ ಉದಾಹರಣೆಯಾಗಿರುವೆ, ಬಿಜೆಪಿ ತತ್ವ ಹಾಗೂ ಸಿದ್ಧಾಂತವೇ ಬೇರೆ, ಉಳಿದ ಪಕ್ಷದ‌ ನೀತಿಯೇ ಬೇರೆಯಾಗಿವೆ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ, ಸಾಮಾನ್ಯ ಕಾರ್ಯಕರ್ತನೂ ವಿವಿಧ ಉನ್ನತ ಸ್ಥಾನ ಅಲಂಕರಿಸಿದ ಸಾಕಷ್ಟು ಉದಾಹರಣೆಗಳಿವೆ, ಬಿಜೆಪಿ ಎಂದಿಗೂ ಅಧಿಕಾರಕ್ಕಾಗಿ ಬಡಿದಾಡೋಲ್ಲ, ಜನರ ಅಭಿವೃದ್ಧಿಗಾಗಿ ಹಾಗೂ ದೇಶದ ಅಭಿವೃದ್ದೀಯೇ ಪಕ್ಷದ ಮೊದಲ ಗುರಿಯಾಗಿದೆ, ಕಾಂಗ್ರೆಸ್ ನವರು ಸುಳ್ಳು ಹೇಳುವದರಲ್ಲಿ ನಿಶ್ಚೀಮರು, ಸಭೆ ಸಮಾರಂಭಗಳಲ್ಲಿ ಮಾರುದ್ಧ ಭಾಷಣ ಬಿಗಿದು ಜನರ ದಿಕ್ಕನ್ನು ತಪ್ಪಿಸುವ ಬುದ್ದಿ ಕಾಂಗ್ರೆಸ್ ನವರದ್ದಾಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಜನಪರ ಆಡಳಿತ ಸಹಿಸದೇ ಕಾಂಗ್ರೆಸ್ ನವರು ಅಪಪ್ರಚಾರ‌ ಮಾಡಲು ಮುಂದಾಗಿದ್ದು, ಜನರು‌ ಕಿವಿಕೊಡಬೇಡಿ ಎಂದರು.

ಮೋದಿಜೀ ವ್ಯಕ್ತಿಯಲ್ಲ, ಅವರೊಬ್ಬ ಪಕ್ಷದ ಶಕ್ತಿ ಯಾಗಿದ್ದಾರೆ. ಮೋದಿಜೀ ಅವರು ಪ್ರಧಾನಮಂತ್ರಿಯಾದ ಬಳಿಕ ದೇಶದ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಎಲ್ಲ ವರ್ಗದವರಿಗೂ ಅನೇಕ ‌ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ವಿಶ್ವದ ಗಮನಸೆಳೆದಿದ್ದಾರೆ. ಬಡವರು, ಶ್ರೀಮಂತರು ಎನ್ನದೇ ಎಲ್ಲರನ್ನೂ ಕಾಡುತ್ತಿರುವ ಹೆಮ್ಮಾರಿ ಕೋರೊನಾ ನಿಯಂತ್ರಣಕ್ಕೆ ಮೋದಿಜೀ ಅವರು ತೆಗೆದುಕೊಂಡ ಕ್ರಮಗಳನ್ನು ವಿಶ್ವವೇ ಕೊಂಡಾಡಿದೆ. ದೇಶದ ಪ್ರತಿಯೋಬ್ಬ ನಾಗರಿಕರಿಗೂ ಉಚಿತ‌ ವ್ಯಾಕ್ಸಿನ್ ನೀಡುವುದು ಸುಲಭದ ಮಾತಲ್ಲ, ವಿಶ್ವದಲ್ಲೇ ನಮ್ಮ ದೇಶ‌ ಗಮನಸೆಳೆದಿದೆ, ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ವೇಳೆ‌ ಮೋದಿಜೀ ಅವರು ಕೈಕಟ್ಟಿ ಕುಳಿತಿದ್ದರೇ ಕೊಟ್ಯಾಂತರ ‌ಜನರ ಜೀವ ಹಾರಿಹೋಗುತ್ತಿತ್ತು, ಅವರೋಬ್ಬ ವ್ಯಕ್ತಿಯಲ್ಲ ದೇಶದ ಆಸ್ತಿ ಎಂದು ಬಣ್ಣಿಸಿದರು.
ಅಲ್ಪಸಂಖ್ಯಾತ ಮೋರ್ಚಾದ ರಾಜ್ಯಾಧ್ಯಕ್ಷ ಸೈಯದ್ ಸಲಾಂ ಸಾಬ್ ಅವರು‌ ಮಾತನಾಡಿ, ವಿಧಾನ ಸಭೆ, ಜಿ.ಪಂ.ಹಾಗೂ ತಾ.ಪಂ.ಚುನಾವಣೆ ಸಮೀಪಿಸುತ್ತಿದ್ದು, ಕಾರ್ಯಕರ್ತರು ಸನ್ನದ್ದರಾಗಬೇಕು, ಕಾರ್ಯಕರ್ತರೇ ಪಕ್ಷದ ಜೀವಾಳ, ಕಾರ್ಯಕರ್ತರ ಶ್ರಮದಿಂದಲೇ ದೇಶದಲ್ಲೇ ಕಮಲ ಅರಳಿದೆ, ರಾಜ್ಯದಲ್ಲೂ ಮತ್ತೋಮ್ಮೆ ಕಮಲ ಅರಳಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ರಾಜ್ಯ ಉಪಾದ್ಯಕ್ಷ‌ ನೂರ್‌ಭಾಷಾ, ನೂರ್ ಅಹಮದ್ ರಾಜ್ಯ ಕಾರ್ಯದರ್ಶಿ, ಅನಿಲ್ ಕುಮಾರ್ ಮೋಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಶೋಕ್ ಕುಮಾರ್ ಜಿ.ಪ್ರ., ಶಿವಶಂಕರ ರೆಡ್ಡಿ, ಕೆ.ಬಿ.ವೆಂಕಟೇಶ್ ಬಳ್ಳಾರಿ ನಗರ ಅದ್ಯಕ್ಷರು ಸೇರಿದಂತೆ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು, ಮಂಡಲದ ಪದಾಧಿಕಾರಿಗಳು, ಕಚೇರಿ ಕಾರ್ಯದರ್ಶಿ ರಾಮ ಕ್ರಷ್ಣ, ಅಂಜಿ ಕಮ್ಮರಚೇಡು ಬಿಜೆಪಿ ಸೋಶಿಯಾಲ್ ಮೀಡಿಯಾ ಸೇರಿದಂತೆ ಜಿಲ್ಲಾ ಕಾರ್ಯಕಾರಿಣಿ ಸದ್ಯಸರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!