Wednesday, August 10, 2022

Latest Posts

ಬಿಜೆಪಿಯವರು ನನ್ನನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ:  ಬಿ.ಕೆ. ಸಂಗಮೇಶ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬಿಜೆಪಿಯವರು ನನ್ನನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದೆಲ್ಲಾ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸಿಎಂ ವಿರುದ್ಧ ಭದ್ರಾವತಿ ಶಾಸಕ  ಬಿ.ಕೆ. ಸಂಗಮೇಶ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೆಲ್ಲಾ ನಡೆಯೋದಿಲ್ಲ ಸಿಎಂ ಅವರೆ. ದೇವರ ಹೆಸರಿನಲ್ಲಿ ಧರ್ಮವನ್ನು ಒಡೆದು ಆಳೋ ಕೆಲಸ ಮಾಡ್ತಾ ಇದ್ದೀರಿ. ಅಧಿಕಾರ ಇದೆ ಅಂತಾ ನೀವು ಪೊಲೀಸರನ್ನು ಉಪಯೋಗಿಸಿಕೊಂಡು ದೌರ್ಜನ್ಯ ಮಾಡ್ತಾ ಇದ್ದೀರಾ? ಎಂದು ಆರೋಪಿಸಿದ್ದಾರೆ

ಬಿಜೆಪಿ ಸರ್ಕಾರ ನನ್ನ ಕುಟುಂಬ ಮತ್ತು ನನ್ನ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ರಾಜಕಾರಣ ಮಾಡುತ್ತಿದೆ. ಇದುವರೆಗೂ ನನ್ನ ಮಗ ಸೇರಿದಂತೆ 15 ಮಂದಿ ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ನಾವು ದೂರು ಕೊಟ್ಟರೆ ನಮ್ಮ ದೂರಿನ ಅನ್ವಯ ಯಾರನ್ನೂ ಬಂಧಿಸಿಲ್ಲ ಎಂದು ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss