ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಬಿಜೆಪಿ ನೂತನ ಅಭಿಯಾನ ಶುರುಮಾಡಿದ್ದು, ಈ ಅಭಿಯಾನವು ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯ ತನಕ(ಫೆಬ್ರವರಿ 11 ರವರೆಗೆ) ನಡೆಯಲಿದೆ.
ಬಿಜೆಪಿಯ ಈ ದೇಣಿಗೆ ಸಂಗ್ರಹ ಕಾರ್ಯಕ್ರಮಕ್ಕೆ ‘ಸೂಕ್ಷ್ಮ ದೇಣಿಗೆ ಅಭಿಯಾನ’ (ಮೈಕ್ರೋ-ಡೊನೇಶನ್) ಎಂದು ಹೆಸರಿಟ್ಟಿದೆ.
ಇಂದು ಬಿಜೆಪಿ ನಿಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 1000 ರೂಪಾಯಿ ದೇಣಿಗೆ ನೀಡಿದ್ದಾರೆ. ಜೊತೆಗೆ ನಿಮ್ಮ ಕೈಲಾದಷ್ಟು ಮೊತ್ತದ ದೇಣಿಗೆ ನೀಡಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಇದರೊಂದಿಗೆ ತನ್ನ ಅಕೌಂಟ್ ನಂಬರ್, ಮೇಲ್ ಐಡಿ, ಪ್ಯಾನ್ ನಂಬರ್ ಮತ್ತು ಮೇಲ್ ಐಡಿಯನ್ನು ಬ್ಲರ್ ಮಾಡಿ ಹೈಡ್ ಮಾಡಿರುವ ರಸೀದಿಯನ್ನೂ ಹಂಚಿಕೊಂಡಿದ್ದಾರೆ. ಬಿಜೆಪಿಯನ್ನು ಬಲಿಷ್ಠಗೊಳಿಸಲು ಸಹಕರಿಸಿ ಎಂದು ಬರೆದುಕೊಂಡಿದ್ದಾರೆ. ಭಾರತವನ್ನು ಬಲಿಷ್ಠಗೊಳಿಸಲು ಸಹಾಯ ಮಾಡಿ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಪಕ್ಷಕ್ಕೆ 1 ಸಾವಿರ ರೂಪಾಯಿ ದೇಣಿಗೆ ನೀಡಿದ್ದಾರೆ. ‘ನಾನು NaMo ಆಯಪ್ ಮೂಲಕ 1000 ರೂಪಾಯಿ ನೀಡಿ, ಪಕ್ಷ ಸದೃಢಗೊಳಿಸಲು ನನ್ನದೇ ಆದ ಚಿಕ್ಕ ಕೊಡುಗೆ ನೀಡಿದ್ದೇನೆ. ನೀವು ರೆಫೆರೆಲ್ ಕೋಡ್ ಬಳಸಿಕೊಂಡು, ಈ ಅಭಿಯಾನದಲ್ಲಿ ಸೇರಿಸಿಕೊಳ್ಳಬಹುದು. ಈ ಮೂಲಕ ಬಿಜೆಪಿಯನ್ನು ಬಲಿಷ್ಠಗೊಳಿಸಬಹುದು’ ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.
ಇಲ್ಲಿ ಐದು ರೂಪಾಯಿಯಿಂದ 1000 ಸಾವಿರ ರೂಪಾಯಿವರೆಗೆ ದೇಣಿಗೆ ನೀಡಲು ಅವಕಾಶವಿದೆ. NaMo ಆಪ್ ಮೂಲಕ ಯಾವುದೇ ವ್ಯಕ್ತಿ ಈ ದೇಣಿಗೆಯನ್ನು ನೀಡಬಹುದು. ಇನ್ನು ಹೆಚ್ಚು ದೇಣಿಗೆ ಸಂಗ್ರಹಿಸುವ ಕಾರ್ಮಿಕರ ಕೊಡುಗೆಯನ್ನು ಸಹ ಪ್ರಶಂಸಿಸಲಾಗುತ್ತದೆ. ಇದರೊಂದಿಗೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗರಿಷ್ಠ ದೇಣಿಗೆ ಸಂಗ್ರಹಿಸುವವರನ್ನೂ ಗುರುತಿಸಲಾಗುವುದು.
I have donated Rs. 1,000 towards the party fund of the Bharatiya Janata Party.
Our ideal of always putting Nation First and the culture of lifelong selfless service by our cadre will be further strengthened by your micro donation.
Help make BJP strong. Help make India strong. pic.twitter.com/ENdytJYEj5
— Narendra Modi (@narendramodi) December 25, 2021
A special connect campaign by the BJP from 25th December – Jayanti of Atal ji, to 11th February – Punya Tithi of Deen Dayal ji.
Your support will enthuse millions of Karyakartas who are selflessly devoted to the cause of nation building. @BJP4India https://t.co/CO75lMX33e
— Narendra Modi (@narendramodi) December 25, 2021