Monday, August 8, 2022

Latest Posts

ಬಿಜೆಪಿ ವತಿಯಿಂದ ವೈದ್ಯಕೀಯ ತಂಡ, ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

ದಿಗಂತ ವರದಿ ಕಲಬುರಗಿ: 

100 ಕೋಟಿಗೂ ಅಧಿಕ ಕೋವಿಡ್ ಲಸಿಕಾ ಡೋಸ್ ಗಳನ್ನೂ ನೀಡಿ ಭಾರತ ವಿಶ್ವ ದಾಖಲೆ ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಕಲಬುರಗಿ ಬಿಜೆಪಿ ಉತ್ತರ ಮಂಡಲದಲ್ಲಿರುವ ದುಬೈ ಕಾಲೊನಿಯ ಯುನಾನಿ ಆಸ್ಪತ್ರೆಯಲ್ಲಿ
ಈ ದೊಡ್ಡ ಲಸಿಕಾ ಅಭಿಯಾನಕ್ಕೆ ಶ್ರಮಿಸಿದ ವೈದ್ಯಕೀಯ ತಂಡಕ್ಕೆ,ಸ್ಟಾಫ್ ನರ್ಸಗಳಿಗೆ,ಆಶಾ ಕಾರ್ಯಕರ್ತರಿಗೆ ಎಲ್ಲಾ ಕೋವಿಡ್ ವಾರಿಯರ್ಸ್ಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾಯ೯ಕ್ರಮದಲ್ಲಿ ಮಾತನಾಡಿದ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಇಡೀ ವಿಶ್ವದಲ್ಲಿಯೇ ಒಂದು ನೂರು ಕೋಟಿ ಭಾರತೀಯರಿಗೆ ಉಚಿತವಾಗಿ ಕೋವಿಡ ಲಸಿಕೆ ನೀಡುವುದರೊಂದಿಗೆ ವಿಶ್ವದಾಖಲೆ ಬರೆದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರಿಗೆ ಧನ್ಯವಾದಗಳನ್ನು ಅರ್ಪಿಸಬೇಕೆಂದರು.

ಅದರಂತೆ ಈ ವಿಶೇಷ ಅಭಿಯಾನದಲ್ಲಿ ಸತತವಾಗಿ ಸೇವೆ ಸಲ್ಲಿಸಿದ ವೈದ್ಯರು ಹಾಗೂ ನಸ೯ಗಳಿಗೆ, ಆಶಾ ಕಾಯ೯ಕತೆ೯ಯರಿಗೆ ಮತ್ತು ಇನ್ನೀತರ ವಾರಿಯರ್ಸ್ ಗೆ ಅಭಿನಂದನೆಗಳು ಸಲ್ಲಿಸುವ ಸಮಯ ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ಸಿದ್ದಾಜಿ ಪಾಟೀಲ,ಬಿಜೆಪಿ ಪ್ರದಾನ ಕಾರ್ಯದರ್ಶಿ ಉಮೇಶ್ ಪಾಟೀಲ,ವೈದ್ಯರಾದ
ಡಾ.ಸಂಧ್ಯಾರಾಣಿ,ಮಹಾನಗರ ಪಾಲಿಕೆಯ ಸದಸ್ಯರು,ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss