ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಂತಿಮ ಹಂತದ ‘ಸೇವಾ’ ಭಾರತಿ ಮನೆ ನಿರ್ಮಾಣ ಕಾರ್ಯಕ್ಕೆ ಕಾಸರಗೋಡು ಮಂಡಲ ಬಿಜೆಪಿ ಸಾಥ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಬದಿಯಡ್ಕ:

ಬದಿಯಡ್ಕ ಗ್ರಾಮಪಂಚಾಯಿತಿಯ ಗೋಳಿಯಡ್ಕ ಪರಿಶಿಷ್ಟ ಜಾತಿ ಕಾಲನಿಯಲ್ಲಿ ನೀರಿನ ಟ್ಯಾಂಕ್‌ನ ಅಡಿಯಲ್ಲಿ ವಾಸಿಸುತ್ತಿರುವ ಸುಂದರ ಎಂಬವರ ಬಡಕುಟುಂಬಕ್ಕೆ ಬಿಜೆಪಿ ವತಿಯಿಂದ ನೆರವನ್ನು ನೀಡಲಾಯಿತು. ಮೋದಿ ನೇತೃತ್ವದ ಸರಕಾರದ ಏಳನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ವಿವಿಧ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಕ್ಷದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ನೇತೃತ್ವವನ್ನು ನೀಡಿದ್ದರು. ಸೇವಾಭಾರತಿ ಹಾಗೂ ಅಭಯ ಸೇವಾನಿಧಿ ಬದಿಯಡ್ಕ ಇದರ ನೇತೃತ್ವದಲ್ಲಿ ಸುಂದರರ 10 ಸೆಂಟ್ಸ್ ಸ್ಥಳದಲ್ಲಿ ನಿರ್ಮಿಸುತ್ತಿರುವ ನೂತನ ಮನೆಯ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅದಕ್ಕಾಗಿ ಪಕ್ಷದ ವತಿಯಿಂದ1ಲೋಡ್ ಹೊಯಿಗೆ ಹಾಗೂ 10 ಚೀಲ ಸಿಮೆಂಟನ್ನು ನೀಡಲಾಯಿತು. ಕೆ.ಶ್ರೀಕಾಂತ್ ಅವರು ಸೇವಾ ಭಾರತಿಯ ಕಾರ್ಯಕರ್ತರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಬಡಕುಟುಂಬಕ್ಕೆ ನೆರವಾದ ಸೇವಾಭಾರತಿ :

ಸೇವಾಭಾರತಿ ಮತ್ತು ಅಭಯ ಸೇವಾನಿಧಿ ಬದಿಯಡ್ಕ ಇದರ ನೇತೃತ್ವದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಸಾಮಾಜಿಕ ಜಾಲತಾಣದಲ್ಲಿ ಸಹಾಯವನ್ನು ಅಪೇಕ್ಷಿಸಲಾಗಿದ್ದು, ನೂರಾರು ದಾನಿಗಳು ತಮ್ಮ ಸಹಾಯವನ್ನು ಒದಗಿಸಿರುತ್ತಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಕೊನೆಯ ಹಂತದ ಕಾಮಗಾರಿಗೆ ಇನ್ನೂ ಹೆಚ್ಚಿನ ನೆರವನ್ನು ನಿರೀಕ್ಷಿಸಲಾಗಿದೆ. ಸುಂದರ ಮತ್ತು ಜಯಂತಿ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ನೀರಿನ ಟ್ಯಾಂಕ್‌ನ್ನೇ ಆಶ್ರಯತಾಣವನ್ನಾಗಿಸಿಕೊಂಡಿದ್ದಾರೆ. 7 ವರ್ಷ ಪ್ರಾಯದ ಪುತ್ರಿ, 5 ವರ್ಷ ಪ್ರಾಯದ ವಿಕಲಚೇತನ ಪುತ್ರನೊಂದಿಗೆ ಕಷ್ಟಪಟ್ಟು ಜೀವನವನ್ನು ಸಾಗಿಸಬೇಕಾದ ಪರಿಸ್ಥಿತಿ ಅವರ ಮುಂದಿದೆ. ದಿನಗೂಲಿಯಲ್ಲಿ ಸಿಕ್ಕ ಹಣದಿಂದ ಹೇಗೋ ಬದುಕಿಕೊಂಡಿದ್ದಾರೆ. ಕುಟುಂಬವು ಅಂಗವೈಕಲ್ಯದಿಂದ ಬಳಲುತ್ತಿರುವ ಮಗನೊಂದಿಗೆ ಕಷ್ಟ ಪಟ್ಟು ಜೀವಿಸುತ್ತಿದೆ.

ಇವರ ಜೀವನ ಎಲ್ಲರಂತಾಗಲು ನೀವೂ ಸಹಾಯ ಮಾಡಲು ಬಯಸಿದರೆ ಈ ಕೆಳಕಂಡ ಅಕೌಂಡ್ ನಂಬರ್‌ಗೆ ನಿಮ್ಮ ಕೈಲಾದ ನೆರವು ನೀಡಿ..

Name : Jayanthi
A/C Info : 40617101084382
IFSE Code : KLGB0040617
Kerala Gramin Bank, Badiadka

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss